ಸಕಲೇಶಪುರ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯುತ್ತಿಲ್ಲ, ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಹೆತ್ತೂರು ದೇವರಾಜ್ ತಾಲೂಕು ಕಚೇರಿ ಎದುರು ಭಿಕ್ಷೆ ಬೇಡುವ ಮೂಲಕ ಪ್ರತಿಭಟಿಸಿದರು.
ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಹಸೀಲ್ದಾರ್ ವಿ. ಮಂಜುನಾಥ್ ಸಾರ್ವಜನಿಕರನ್ನು ಸಲ್ಲದ ಕಾರಣ ಹೇಳಿ ಕಚೇರಿಗೆ ಅಲೆಸುತ್ತಾರೆ ಎಂದು ಆಪಾದಿಸಿದರು.
ನಿತ್ಯ ಕಚೇರಿಗೆ ಬಂದು ಬಸ್ ಟಿಕೆಟ್ ಗೂ ಹಣವಿಲ್ಲದಾಗಿದೆ. ಆದ್ದರಿಂದ ಭಿಕ್ಷೆ ನೀಡಿ, ನಿತ್ಯ ಕಚೇರಿಗೆ ಬರಲು ಹಣ ಬೇಕು ಎಂದು ಮಿನಿವಿಧಾನ ಸೌಧದ ಎದುರು ಕರ್ಚಿಫ್ ಹಾಸಿ ಭಿಕ್ಷೆ ಬೇಡಿದರು.
ಕೆಲವರು ಕುತೂಹಲದಿಂದ ಗಮನಿಸಿ ಮುಂದೆ ಸಾಗಿದರೆ ಕೆಲವರು ಕರ್ಚಿಫ್ ಗೆ ಚಿಲ್ಲರೆ ಹಣ ಭಿಕ್ಷೆಯಾಗಿ ಹಾಕಿದರು.