??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ನ್ಯೂಸ್

ತ್ಯಾಜ್ಯ ನೀರಿನಿಂದ ಬೆಳೆಗೆ ಹಾನಿ

ಎ. ಆರ್. ರಘುರಾಮ

ಸಾಲಿಗ್ರಾಮ: ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆ ನೀರನ್ನು ನಾಲೆಗೆ ಹರಿಸುತ್ತಿರುವ ಕಾರಣ ಭತ್ತದ ಬೆಳೆಗೆ ಹಾನಿಯಾಗುತ್ತಿದೆ ಎಂದು ರೈತರು ಕಾರ್ಖಾನೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ನಾಗೇಂದ್ರ ಮಾತನಾಡಿ, ಕಾರ್ಖಾನೆ ತ್ಯಾಜ್ಯ ನೀರು ಕಟ್ಟೆಪುರ ನಾಲೆಗೆ ಹರಿಸುತ್ತಿರುವ ಕಾರಣ ಭತ್ತದ ಬೆಳೆ ನಷ್ಟವಾಗುತ್ತಿದೆ. ಸುಮಾರು 10 ಎಕರೆ ವಿಸ್ತೀರ್ಣದ ಕೃಷಿ ಭೂಮಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸಕ್ಕೆರೆ ಕಾರ್ಖಾನೆಗಳು ನಾಲೆಗೆ ತ್ಯಾಜ್ಯ ನೀರು ಹರಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಮತ್ತೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕಾರ್ಖಾನೆ ಮೇಲ್ವಿಚಾರಕರ ಮನವಿಗೆ ಪ್ರತಿಭಟನೆ ಹಿಂಪಡೆದ ಮುಖಂಡರು ಒಂದು ವಾರದ ಗಡುವು ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ರಂಗಸ್ವಾಮಿ, ರಘು, ರಂಗೇಗೌಡ, ವೆಂಕಟೇಶ, ರಾಜೇಗೌಡ, ಗಿರೀಶ, ರಮೇಶ, ಕುಮಾರ, ಯೋಗಾನಂದ ಇತರರು ಭಾಗವಹಿಸಿದ್ದರು.