ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆ ಖಂಡಿಸಿ ಲಕ್ಷ್ಮೇಶ್ವರದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು. ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಥಾವರೆಪ್ಪ ಲಮಾಣಿ, ಜಾನು ಲಮಾಣಿ ಇತರರಿದ್ದರು. 
ನ್ಯೂಸ್

ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ
ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಅನೇಕ ರೈತಪರ ಯೋಜನೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಂಡು ರೈತರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗೂ ಶಿರಹಟ್ಟಿ ಬಿಜೆಪಿ ಮಂಡಳ, ಲಕ್ಷ್ಮೇಶ್ವರ ನಗರ ಘಟಕ, ರೈತ ಘಟಕ ಇವುಗಳ ವತಿಯಿಂದ ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡು ತಹಸೀಲ್ದಾರ್‌ಗೆ ಮನವಿ ಸಲ್ಲಿ ಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಸರ್ಕಾರ ಇದನ್ನು ಕೊಡಲು ಮೀನಮೇಷ ಎಣಿಸುತ್ತಿದೆ. ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರ ನೀತಿ ವಿರುದ್ಧ ಕಿಡಿಕಾರಿದರು. ಸರ್ಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿ ಕುಲಕರ್ಣಿ, ಬಸವರಾಜ ಯಂಕಂಚಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ್, ಗದಗ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿಸರ್ಕಾರದ ವೈಫಲ್ಯದ ವಿರುದ್ಧ ಕಿಡಿಕಾರಿದರು.
ಸೋಮವಾರ ಬೆಳಗ್ಗೆ ನಿಗದಿಯಂತೆ ಪಟ್ಟಣದ ಪಂಪ ವೃತ್ತದಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ತಹಸೀಲ್ದಾರ್‌ಧನಂಜಯ ಎಂ., ಅವರಿಗೆ ಮನವಿ ಸಲ್ಲಿಸಿದರು. ಮೆರವಣಿಗೆಯಲ್ಲಿ ಉದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಥಾವರೆಪ್ಪ ಲಮಾಣಿ, ಜಾನು ಲಮಾಣಿ, ನಿಂಗಪ್ಪ ಬನ್ನಿ, ಡಿ.ವೈ. ಹುನಗುಂದ, ಪರಶುರಾಮ ಇಮ್ಮಡಿ, ವಿಜಯಕುಮಾರ ಹತ್ತಿಕಾಳ, ಪರಮೇಶ ಹತ್ತಾಳ, ಕೃಷ್ಣ ಬಿದರಳ್ಳಿ, ಅಶೋಕ ಹರಿಜನ, ಅಶೋಕ ಶಿರಹಟ್ಟಿ, ಭೀಮಣ್ಣ ಯಂಗಾಡಿ, ಶಿವಣ್ಣ ಮಾದರ, ಹನಮಂತ ಜಾಲಿಮರದ, ಜಗದೀಶಗೌಡ ಪಾಟೀಲ, ಮಂಜನಗೌಡ ಕೆಂಚನಗೌಡ್ರ, ನೀಲಪ್ಪ ಹತ್ತಿ, ಶಿವಯೋಗಿ ಅಂಕಲಕೋಟಿ, ಸೋಮೇಶ ಉಪನಾಳ, ಶಿವಣ್ಣ ಲಮಾಣಿ, ಪಾಂಡು ಲಮಾಣಿ, ಅನೀಲ ಮುಳಗುಂದ, ಬಸವರಾಜ ಕಲ್ಲೂರ, ಪವಿತ್ರ ಕಲಬುರ್ಗಿ, ರಾಧಾ ಬಾರಕೇರ, ವೀಣಾ ಬೂದಿಹಾಳ, ಸೋಮರೆಡ್ಡಿ ಮುದ್ದಾಬಳ್ಳಿ, ಕುಮಾರ ಹಿರೇಮಠ, ಶಕ್ತಿ ಕತ್ತಿ, ಸುರೇಶ ಮಾಂಡ್ರ ಇತರರಿದ್ದರು.