ಜೆನ್​ ಜಿ ಯುವಜನತೆಯಲ್ಲಿ ಪ್ರೋಟೀನ್ ಆಹಾರ ಮತ್ತು ಪ್ಯಾಕ್ಡ್ ಸ್ನ್ಯಾಕ್ಸ್‌ಗಳ ಕ್ರೇಜ್ 
ನ್ಯೂಸ್

ಪ್ರೋಟೀನ್ ಗೀಳಾ ಅಥವಾ ಆರೋಗ್ಯದ ಮಂತ್ರವಾ?: Gen Z ಯುವಜನರ ಹೊಸ ಆಹಾರ ಟ್ರೆಂಡ್! | Gen Z Protein Trend

Gen Z Protein Trend: ಈಗಿನ ಜೆನ್ ಜಿ ಹುಡುಗಾಡ್ತೀರಲ್ಲ, ತಿನ್ನುವ ಪ್ರತಿಯೊಂದರಲ್ಲೂ ಪ್ರೋಟೀನ್ ಇರಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ದಿನ ಕುಡಿಯೋ ಕಾಫಿ ಹತ್ತಿರದಿಂದ ಹಿಡಿದು, ಕುಕೀಸ್, ಸ್ನ್ಯಾಕ್ಸ್ ಎಲ್ಲದರಲ್ಲೂ ಪ್ರೋಟೀನ್ ಇರೋದೇ ಬೇಕು ಅಂತ ಹುಡುಕಾಡ್ತಿದ್ದಾರೆ. ಫುಡ್ ಸ್ಟೈಲ್‌ನಲ್ಲಿ ಪ್ರೋಟೀನ್‌ಗೆ ಈ ಮಟ್ಟಕ್ಕೆ ಪ್ರಾಮುಖ್ಯತೆ ಸಿಗ್ತಿರೋ ಕಾಲದಲ್ಲಿ, ಈ ಟ್ರೆಂಡ್ ನಿಜಕ್ಕೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಂತ ಒಂದು ಸಲ ಯೋಚ್ನೆ ಮಾಡ್ಬೇಕಲ್ವಾ?

ಸಾಮಾಜಿಕ ಜಾಲತಾಣಗಳಲ್ಲಿ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗಳು, ಆಹಾರ ಬ್ರ್ಯಾಂಡ್‌ಗಳು ಮತ್ತು ಪೌಷ್ಟಿಕಾಂಶ ತಜ್ಞರು ಪ್ರೋಟೀನ್ ಆಧಾರಿತ ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರೋಟೀನ್ ರೆಸಿಪಿಗಳು, ಉತ್ಪನ್ನಗಳ ವಿಮರ್ಶೆಗಳು ಮತ್ತು ಆಹಾರ ಪದ್ಧತಿಗಳು ಯುವಜನರ ಗಮನ ಸೆಳೆಯುತ್ತಿವೆ. ಇದರಿಂದ ಮಾರುಕಟ್ಟೆಯಲ್ಲೂ ಪ್ರೋಟೀನ್ ಅಂಶ ಹೆಚ್ಚಿರುವ ಉತ್ಪನ್ನಗಳ ಸಂಖ್ಯೆ ಹೆಚ್ಚುತ್ತಿದೆ.

ಹೈ ಪ್ರೋಟೀನ್ ಎಂದರೆ ಆರೋಗ್ಯಕರ ಎಂದರ್ಥವಲ್ಲ

ಯಾವುದೇ ಆಹಾರದ ಪ್ಯಾಕೆಟ್ ಮೇಲೆ 'ಹೈ ಪ್ರೋಟೀನ್' ಎಂದು ಬರೆದಿದ್ದರೆ ಅದು ಸಂಪೂರ್ಣ ಆರೋಗ್ಯಕರ ಎಂದು ಭಾವಿಸುವುದು ಸರಿಯಲ್ಲ. ಕೆಲವು ಪ್ರೋಟೀನ್ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಇರಬಹುದು. ಇನ್ನು ಕೆಲವು ಉತ್ಪನ್ನಗಳಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸಿರಬಹುದು.ಹೀಗಾಗಿ ಆಹಾರ ಖರೀದಿಸುವಾಗ ಪ್ರೋಟೀನ್ ಪ್ರಮಾಣವನ್ನು ಮಾತ್ರ ಗಮನಿಸದೆ, ಅದರಲ್ಲಿರುವ ಸಕ್ಕರೆ, ಕೊಬ್ಬು ಮತ್ತು ಸೋಡಿಯಂ ಪ್ರಮಾಣವನ್ನೂ ಪರಿಶೀಲಿಸುವುದು ಮುಖ್ಯ.

ಸಾಮಾನ್ಯ ಆಹಾರದಲ್ಲೇ ಸಿಗುತ್ತದೆ ಪ್ರೋಟೀನ್

ಪ್ರತಿಯೊಬ್ಬರೂ ಪ್ರೋಟೀನ್ ಪಡೆಯಲು ದುಬಾರಿ ಪೌಡರ್ ಅಥವಾ ವಿಶೇಷ ಆಹಾರ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ. ನಮ್ಮ ದೈನಂದಿನ ಆಹಾರದಲ್ಲೇ ಸಾಕಷ್ಟು ಪ್ರೋಟೀನ್ ಲಭ್ಯವಿದೆ. ಬೇಳೆಕಾಳುಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ ಹಾಗೂ ನಟ್ಸ್‌ಗಳಂತಹ ಆಹಾರಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಸಮತೋಲಿತ ಆಹಾರ ಸೇವನೆಯ ಮೂಲಕವೂ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಸಿಗುತ್ತೆ.

ಉದಾಹರಣೆಗೆ, ಸಾಮಾನ್ಯ ಬಿಸ್ಕತ್‌ಗಿಂತ ಪ್ರೋಟೀನ್ ಕುಕೀಸ್‌ನಲ್ಲಿ ಹೆಚ್ಚಿನ ಪ್ರೋಟೀನ್ ಇರಬಹುದು. ಆದರೆ ಅದರಿಂದ ಪ್ರೋಟೀನ್ ಕುಕೀಸ್ ಪ್ರತಿದಿನ ಸೇವಿಸಲು ಹೆಚ್ಚು ಆರೋಗ್ಯಕರ ಆಯ್ಕೆ ಎಂದರ್ಥವಲ್ಲ. ಇದೇ ರೀತಿ ಕಾಫಿಗೆ ಪ್ರೋಟೀನ್ ಪೌಡರ್ ಸೇರಿಸಿದ ಮಾತ್ರಕ್ಕೆ ಅದು ಉತ್ತಮ ಪೌಷ್ಟಿಕ ಆಹಾರವಾಗುವುದಿಲ್ಲ.

ಪ್ರೋಟೀನ್ ವಿಚಾರದಲ್ಲಿ ಇರಲಿ ಸಮತೋಲನ

ಯುವಜನರಲ್ಲಿ ಪ್ರೋಟೀನ್ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಒಳ್ಳೆಯ ಬೆಳವಣಿಗೆಯಾದರೂ, ಪ್ರತಿಯೊಂದು ಊಟದಲ್ಲೂ ಪ್ರೋಟೀನ್ ಇರಲೇಬೇಕು ಎಂಬ ಗೀಳು ಬೆಳೆಸಿಕೊಳ್ಳಬಾರದು. ಪ್ರತಿಯೊಬ್ಬರ ಪ್ರೋಟೀನ್ ಅಗತ್ಯವೂ ವಯಸ್ಸು ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಹೀಗಾಗಿ ಪ್ರೋಟೀನ್ ಉತ್ಪನ್ನಗಳಿಗಿಂತ ವೈವಿಧ್ಯಮಯ ಪೌಷ್ಟಿಕ ಆಹಾರ ಹಾಗೂ ಸಮತೋಲಿತ ಆಹಾರ ಪದ್ಧತಿಗೆ ಆದ್ಯತೆ ನೀಡುವುದು ಮುಖ್ಯ.

ಸಾಮಾಜಿಕ ಜಾಲತಾಣಗಳ ಮೂಲಕ ಇನ್‌ಫ್ಲುಯೆನ್ಸ್​

ಸಾಮಾಜಿಕ ಜಾಲತಾಣಗಳಲ್ಲಿ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗಳು, ಆಹಾರ ಬ್ರ್ಯಾಂಡ್‌ಗಳು ಮತ್ತು ಪೌಷ್ಟಿಕಾಂಶ ತಜ್ಞರು ಪ್ರೋಟೀನ್ ಆಧಾರಿತ ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರೋಟೀನ್ ರೆಸಿಪಿಗಳು, ಉತ್ಪನ್ನಗಳ ವಿಮರ್ಶೆಗಳು ಮತ್ತು ಆಹಾರ ಪದ್ಧತಿಗಳು ಯುವಜನರ ಗಮನ ಸೆಳೆಯುತ್ತಿವೆ. ಇದರಿಂದ ಮಾರುಕಟ್ಟೆಯಲ್ಲೂ ಪ್ರೋಟೀನ್ ಅಂಶ ಹೆಚ್ಚಿರುವ ಉತ್ಪನ್ನಗಳ ಸಂಖ್ಯೆ ಹೆಚ್ಚುತ್ತಿದೆ.

ಹೈ ಪ್ರೋಟೀನ್ ಎಂದರೆ ಆರೋಗ್ಯಕರ ಎಂದರ್ಥವಲ್ಲ

ಯಾವುದೇ ಆಹಾರದ ಪ್ಯಾಕೆಟ್ ಮೇಲೆ 'ಹೈ ಪ್ರೋಟೀನ್' ಎಂದು ಬರೆದಿದ್ದರೆ ಅದು ಸಂಪೂರ್ಣ ಆರೋಗ್ಯಕರ ಎಂದು ಭಾವಿಸುವುದು ಸರಿಯಲ್ಲ. ಕೆಲವು ಪ್ರೋಟೀನ್ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಇರಬಹುದು. ಇನ್ನು ಕೆಲವು ಉತ್ಪನ್ನಗಳಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸಿರಬಹುದು.

ಸಾಮಾನ್ಯ ಆಹಾರದಲ್ಲೇ ಸಿಗುತ್ತದೆ ಪ್ರೋಟೀನ್

ಪ್ರೋಟೀನ್ ಪಡೆಯಲು ದುಬಾರಿ ಪೌಡರ್ ಅಥವಾ ವಿಶೇಷ ಆಹಾರ ಉತ್ಪನ್ನಗಳ ಅಗತ್ಯವಿಲ್ಲ. ಬೇಳೆಕಾಳು, ಹಾಲು, ಮೊಟ್ಟೆ, ಸೋಯಾ ಮತ್ತು ನಟ್ಸ್‌ಗಳಂತಹ ದೈನಂದಿನ ಆಹಾರದಲ್ಲೇ ಪ್ರೋಟೀನ್ ಲಭ್ಯವಿದೆ. ಪ್ರೋಟೀನ್ ಕುಕೀಸ್ ಅಥವಾ ಪ್ರೋಟೀನ್ ಕಾಫಿಯಲ್ಲಿ ಹೆಚ್ಚಿನ ಪ್ರೋಟೀನ್ ಇದ್ದರೂ ಅವು ಸಂಪೂರ್ಣ ಆರೋಗ್ಯಕರ ಆಹಾರ ಎಂದರ್ಥವಲ್ಲ.

ಪ್ರೋಟೀನ್ ವಿಚಾರದಲ್ಲಿ ಇರಲಿ ಸಮತೋಲನ

ಯುವಜನರಲ್ಲಿ ಪ್ರೋಟೀನ್ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಉತ್ತಮ ಬೆಳವಣಿಗೆಯಾದರೂ, ಪ್ರತಿಯೊಂದು ಊಟದಲ್ಲೂ ಪ್ರೋಟೀನ್ ಇರಲೇಬೇಕು ಎಂಬ ಗೀಳು ಬೆಳೆಸಿಕೊಳ್ಳಬಾರದು. ವಯಸ್ಸು, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಪ್ರೋಟೀನ್ ಅಗತ್ಯ ಬದಲಾಗುವುದರಿಂದ, ಪ್ರೋಟೀನ್ ಉತ್ಪನ್ನಗಳಿಗಿಂತ ವೈವಿಧ್ಯಮಯ ಪೌಷ್ಟಿಕ ಆಹಾರ ಹಾಗೂ ಸಮತೋಲಿತ ಆಹಾರ ಪದ್ಧತಿಗೆ ಆದ್ಯತೆ ನೀಡಬೇಕು.

ಇದನ್ನೂ ಓದಿ: ರೈತರ ಕಡತಗಳಿಗೆ ಕಸದ ಬುಟ್ಟಿ ಭಾಗ್ಯ: ನಾಗಮಂಗಲ ಉಪ ತಹಶೀಲ್ದಾರ್ ತಲೆದಂಡ! | Mandya Land Records

ಒಟ್ಟಿನಲ್ಲಿ, ಪ್ರೋಟೀನ್ ದೇಹಕ್ಕೆ ಅಗತ್ಯವಾದ ಪೋಷಕಾಂಶವೇ ಹೊರತು ಕೇವಲ ಆಹಾರ ಉತ್ಪನ್ನಗಳ ಮಾರಾಟದ ಘೋಷಣೆಯಲ್ಲ. ಆರೋಗ್ಯಕರ ಜೀವನಶೈಲಿಗೆ ಪ್ರೋಟೀನ್ ಮಾತ್ರವಲ್ಲದೆ, ಎಲ್ಲಾ ಪೋಷಕಾಂಶಗಳ ಸಮತೋಲನವೂ ಅಗತ್ಯ.