ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು. ಪರಿಸರವಾದಿ ಜೀತ್ ಮಿಲನ್ ರೋಚ್, ಸಂಸ್ಥೆಯ ಪ್ರಿನ್ಸಿಪಾಲ್ ರೋಹನ್ ಡಿ’ಅಲ್ಮೇಡಾ ಎಸ್.ಜೆ. ಮತ್ತಿತರರಿದ್ದರು.
ಮಂಗಳೂರು: ನಾವು ಪ್ರಕೃತಿಗೆ ಮರಳಿ ಕೊಡುವ ಜವಾಬ್ದಾರಿಯುತ ತಲೆಮಾರಾಗಬೇಕು. ಭೂಮಿಗೆ ಸೂಪರ್‌ಹೀರೋಗಳು ಬೇಕಾಗಿಲ್ಲ; ಜವಾಬ್ದಾರಿಯುತ ಹಸಿರು ಯೋಧರು ಬೇಕಾಗಿದ್ದಾರೆ ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ಹೇಳಿದರು.
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ನಡೆದ ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ರೋಹನ್ ಡಿ’ಅಲ್ಮೇಡಾ ಎಸ್.ಜೆ. ಮಾತನಾಡಿ, ಆಂದೋಲನದ ಅಂತ್ಯವಲ್ಲ, ಬದಲಿಗೆ ಪರಿಸರದ ಉಸ್ತುವಾರಿಗೆ ಜೀವನಪರ್ಯಂತ ಬದ್ಧತೆಯ ಆರಂಭವಾಗಿದೆ. ಪೃಥ್ವಿ ನಮ್ಮ ಅನನ್ಯ ಆವಾಸ ತಾಣ. ನಾವೆಲ್ಲ ಅದರ ಕಾಳಜಿ ವಹಿಸಬೇಕು ಎಂದರು.
ರಕ್ಷಿಸಿ, ಸಂರಕ್ಷಿಸಿ ಮತ್ತು ಅಭಿವೃದ್ಧಿ ಹೊಂದಿ ಎಂಬ ಧ್ಯೇಯವಾಕ್ಯದೊಂದಿಗೆ 2026ರ ಜೂ.29 ರಿಂದ ಜು. 4 ರವರೆಗೆ ನಡೆದ ಈ ವಾರಪೂರ್ತಿ ಪರಿಸರ ಉಪಕ್ರಮದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಿದ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು. ಚೇತನ್ ಶೆಟ್ಟಿ ಅವರಿಂದ ಹಣ್ಣಿನ ಕೃಷಿ, ಪೂರ್ಣಿಮಾ ಶೆಟ್ಟಿ ಅವರಿಂದ ತೋಟಗಾರಿಕೆ ಮತ್ತು ಕೃಷಿ, ಗ್ಲಾವಿನ್ ರೋಡ್ರಿಗಸ್ ಅವರಿಂದ ಲಂಬ ತೋಟಗಾರಿಕೆ ಮತ್ತು ಸುಸ್ಥಿರ ಅಭ್ಯಾಸಗಳು, ಹಾಗೂ ನವೀನ್ ಆಡ್ಕರ್‌ಅವರಿಂದ ಸೃಜನಾತ್ಮಕ ಎಲೆ ಕಲೆಯ ಕುರಿತ ತಜ್ಞರ ಉಪನ್ಯಾಸಗಳು ವಿದ್ಯಾರ್ಥಿಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಪರಿಸರಕ್ಕೆ ಜವಾಬ್ದಾರಿಯುತ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದವು. ವೈಸ್ ಪ್ರಿನ್ಸಿಪಾಲ್ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕಿಯರಾದ ದೀಪ್ತಿ ಕರ್ಕಡ ಮತ್ತು ದೀಪಾ ಕರ್ಕಡ, ವಿಜ್ಞಾನ ಸಂಯೋಜಕಿ ಶ್ರೀಮತಿ ಶಿಲ್ಪಾ ಬಲ್ಲಾಳ್, ಶಿಕ್ಷಕ ಪ್ರತಿನಿ ಸುಷ್ಮಿತಾ ಕೆ.ಎಸ್. ವಿದ್ಯಾರ್ಥಿ ನಾಯಕರಾದ ಆದಿದೇವ್ ಮತ್ತು ರಿಯಾ ಜೆಸ್ಸಿಕಾ ರೆಗೊ ಅವರ ನೇತೃತ್ವದಲ್ಲಿ ನಡೆಯಿತು.
ಆಶಿಶ್ ಎನ್. ಜೋಶಿ ಸ್ವಾಗತಿಸಿದರು. ಪ್ರಾಯೋಗಿಕ ಪರಿಸರ ಕಾರ್ಯಕ್ರಮದಲ್ಲಿ ನಾನಾ ಸ್ಪರ್ಧೆಗಳ ವಿಜೇತರಿಗೆ ಸೃಜನಶೀಲತೆ, ನಾವೀನ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಅವರ ಬದ್ಧತೆಗಾಗಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ರೆಬೆಕ್ಕಾ ನೆಸ್ಸಾ ಡಿ’ಸೋಜ ವಂದಿಸಿದರು. ಝಾರಾ ಖಾಝಿ ನಿರೂಪಿಸಿದರು.