Property Tax Exemption: ರಾಜ್ಯದ ಗ್ರಾಮ ಪಂಚಾಯತ್ ಮಿತಿಯೊಳಗಿನ ಭಾರತೀಯ ಸೇನಾ ಸಿಬ್ಬಂದಿಯ ಒಡೆತನದ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ಆಂದ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭಾನುವಾರ (ಮೇ.11) ಘೋಷಿಸಿದ್ದಾರೆ.
'ಈವರೆಗೆ ಸೇನೆಯಲ್ಲಿ ನಿವೃತ್ತರಾದ ಅಧಿಕಾರಿಗಳ ಅಥವಾ ಗಡಿಯಲ್ಲಿ ಸೇವೆ ಸಲ್ಲಿಸುವವರ ಕುಟುಂಬಕ್ಕೆ ಮಾತ್ರ ಆಸ್ತಿ ತೆರಿಗೆ ವಿನಾಯಿತು ಇತ್ತು. ಆದರೆ ಇನ್ನು ದೇಶಾದ್ಯಂತ ನಿಯೋಜಿತ ಸ್ಥಳವನ್ನು ಲೆಕ್ಕಿಸದೆ ಎಲ್ಲಾ ಸಕ್ರಿಯ ಸಿಬ್ಬಂದಿಯ ಕುಟುಂಬಕ್ಕೆ ಈ ನಿಯಮ ಅನ್ವಯಿಸಲಿದೆ. ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, ಸಿಆರ್‌ಪಿಎಫ್ ಮತ್ತು ಅರೆಸೈನಿಕ ಪಡೆಗಳ ಧೈರ್ಯವನ್ನು ಗೌರವಿಸುತ್ತದೆ. ರಾಷ್ಟ್ರಕ್ಕೆ ಅವರ ಸೇವೆ ಅಮೂಲ್ಯವಾದುದು' ಎಂದು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆ ದಿನ ನಾನು ಏಕದಿನ ಮಾದರಿಗೂ ವಿದಾಯ ಹೇಳ್ತೀನಿ… ರೋಹಿತ್ ಶರ್ಮರ ಅಚ್ಚರಿ ಹೇಳಿಕೆ ವೈರಲ್! Rohit Sharma
ಸಿಬ್ಬಂದಿ , ಅವರ ಸಂಗಾತಿ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿಯು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಸೈನಿಕ್ ಕಲ್ಯಾಣ ನಿರ್ದೇಶಕರ ಶಿಫಾರಸ್ಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ದೇಶವನ್ನು ಕಾಯುವವರಿಗೆ ಆಂಧ್ರಪ್ರದೇಶ ನೀಡುವ ಗೌರವ ಮತ್ತು ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ಅನ್ನು ಪ್ರಾರಂಭಿಸಿತು. ಪಾಕಿಸ್ತಾನವು ಭಾರತೀಯ ತಾಣಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳನ್ನು ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿತು, ಇದಕ್ಕೆ ಭಾರತವು ತ್ವರಿತ ಪ್ರತಿಕ್ರಿಯೆಯನ್ನು ನೀಡಿತು. (ಏಜೆನ್ಸೀಸ್)