ನ್ಯೂಸ್

ಆಸ್ತಿ ಜಗಳಕ್ಕೆ ಒಂದೂವರೆ ವರ್ಷದ ಮಗುವನ್ನು ಕೊಂದ ಕಿರಾತಕರು…

ಬಿಹಾರ: ಜಮೀನು ವಿವಾದದ ಸಿಟ್ಟಿಗೆ ಒಂದುವರೆ ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ಬಿಹಾರದ ಬಿಹಾರದ ಜೆಹಾನಾಬಾದ್​ನಲ್ಲಿ ನಡೆದಿದೆ.

ಜಮೀನು ವಿವಾದದ ಸಂದರ್ಭದಲ್ಲಿ ಒಂದುವರೆ ವರ್ಷದ ಹಸುಳೆಯನ್ನು ಹತ್ಯೆಗೈದ ಸುದ್ದಿ ಸಿಗುತ್ತಿದ್ದಂತೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವನ್ನು ಕೊಂದ ಆರೋಪದ ಮೇಲೆ ಬಿಹಾರದ ಜೆಹಾನಾಬಾದ್ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ. .

''ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಹಿಳೆ, ತನ್ನ ಒಂದೂವರೆ ತಿಂಗಳ ಮಗುವಿನ ಮಡಿಲಲ್ಲಿಟ್ಟುಕೊಂಡು ಜಗಳಕ್ಕೆ ಇಳಿದಿದ್ದಾಳೆ. ಈ ಸಂದರ್ಭ, ಮಗು ನೆಲದ ಮೇಲೆ ಬಿದ್ದಿದ್ದು ಮೃತಪಟ್ಟಿದೆ. ಸದ್ಯ, ಮಗುವನ್ನು ಕೊಂದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ." ಎಂದು ಜೆಹಾನಾಬಾದ್​ನ ಎಎಸ್​ಪಿ, ಹರಿವಂಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮೃತ ಮಗುವಿನ ತಂದೆ ಚೀನಿ ಲಾಲ್​ ಕುಮಾರ್​ "ಮಗು ಬಿದ್ದ ತಕ್ಷಣ ಅವರು ಕಲ್ಲು ಮತ್ತು ಲಾಠಿಗಳಿಂದ (ಕೋಲುಗಳಿಂದ) ದಾಳಿ ನಡೆಸಿದರು. ಅವನಿಗೆ ಕೇವಲ ಒಂದೂವರೆ ವರ್ಷ" ಎಂದು ಅಳಲು ತೋಡಿಕೊಂಡಿದ್ದಾರೆ.

ಮೂವರು ಆರೋಪಿಗಳ ಗುರುತನ್ನು ಬಹಿರಂಗಪಡಿಸದೇ ಇರುವ ಪೊಲೀಸರು ಮೃತದೇಹವನ್ನು ಸ್ವಾಧಿನಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಈ ಪ್ರದೇಶವು ವಿಷುಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಈ ಕೊಲೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)