ನ್ಯೂಸ್

ಎಂಬಿಎ ಮಾಡಿ ಸಾರ್ವಜನಿಕ ಆಡಳಿತದಲ್ಲಿ ಅನುಭವವಿರುವರಿಗೆ ಪ್ರತಿಷ್ಟಿತ ಆರೋಗ್ಯ ಸಂಸ್ಥೆಯಲ್ಲಿ ಅವಕಾಶ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ಪ್ರೊಜೆಕ್ಟ್ ಕೋ ಆರ್ಡಿನೇಟರ್ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶೇ. 60 ಅಂಕಗಳೊಂದಿಗೆ ಎಂ.ಕಾಂ/ ಎಂಬಿಎ ಪೂರೈಸಿರಬೇಕು. ಸಾರ್ವಜನಿಕ ಆಡಳಿತದಲ್ಲಿ ಅನುಭವ ಹೊಂದಿರಬೇಕು. ಕಂಪ್ಯೂಟರ್ ಸಾಫ್ಟವೇರ್ ಜ್ಞಾನ ಹಾಗೂ ಕನ್ನಡ, ಹಿಂದಿ, ಇಂಗ್ಲಿಷ್ ಭಾಷಾ ಜ್ಞಾನ ಹೊಂದಿರಬೇಕು.

ಗರಿಷ್ಠ ವಯೋಮಿತಿ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ 25 ಸಾವಿರ ರೂ. ವೇತನ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ, ರೆಸ್ಯೂಮ್, ಅಗತ್ಯ ದಾಖಲಾತಿಗಳು ಮತ್ತು ಈ ಹುದ್ದೆ ನಿರ್ವಹಿಸಲು ಇರುವ ಅರ್ಹತೆ ಕುರಿತ ವಿವರ ಇರುವ ಕವರಿಂಗ್ ಲೆಟರ್ ಲಗತ್ತಿಸಿ ಆಗಸ್ಟ್ 7 ರೊಳಗಾಗಿ chsnimhans@gmail.com ವಿಳಾಸಕ್ಕೆ ಮೇಲ್ ಮಾಡಬೇಕು. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.