ಭದ್ರಾ ಜಲಾಶಯ 
ನ್ಯೂಸ್

31ರವರೆಗೆ ಭದ್ರಾ ಸುತ್ತಮುತ್ತ ನಿಷೇಧಾಜ್ಞೆ

ಶಿವಮೊಗ್ಗ: ಭದ್ರಾ ಜಲಾಶಯವು ಭರ್ತಿಯಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಆ.31ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಭದ್ರಾ ಜಲನಯನ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿರುವ ಪರಿಣಾಮ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹಾಗಾಗಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಜಲಾಶಯದ ಬಳಿ ತೆರಳುವಂತಿಲ್ಲ. ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ನೀರಿಗೆ ಇಳಿಯುವುದು, ಫೋಟೊ ತೆಗೆಯುವುದು, ಜಲಾಶಯದ ಮೇಲೆ ಹೋಗುವುದಕ್ಕೂ ನಿರ್ಬಂಧಿಸಲಾಗಿದೆ. ಬಾಗಿನ ನೀಡಲು ಬರುವವರು ನೀರಿಹೆ ಇಳಿಯುವಂತಿಲ್ಲ ಮತ್ತು ಈಜಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.