ನ್ಯೂಸ್

ವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ.10 ಹೆಚ್ಚಳ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು ರಾಜ್ಯ ಸರ್ಕಾರವು ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಳ ಮಾಡಿ ಆದೇಶ ಹೊರಸಿಡಿದೆ. 2024-25ನೇ ಸಾಲಿನ ಪ್ರವೇಶಕ್ಕೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ.

ಆ ಪ್ರಕಾರವಾಗಿ ಸರ್ಕಾರಿ ಕಾಲೇಜು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳ ಶೇ.50 ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟುಗಳಿಗೆ 42,116 ರೂ.ನಿಗದಿ ಪಡಿಸಿದೆ. ಯುವಿಸಿಇ 47,250 ರೂ., ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರೂ. ಮತ್ತು 84,596 ರೂ.ಗಳನ್ನು ನಿಗದಿ ಪಡಿಸಿದೆ.

ಕಾಮೆಡ್-ಕೆ ಕೋಟಾದ ಸೀಟುಗಳಿಗೆ 1,86,111 ರೂ. ಮತ್ತು 2,61,477 ರೂ.ನಿಗದಿ ಪಡಿಸಿದೆ.

ಇದರ ಜತೆಗೆ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಇತರೆ ಶುಲ್ಕವಾಗಿ ವಾರ್ಷಿಕ 20 ಸಾವಿರ ರೂ.ಮೀರದಂತೆ ಪ್ರಥಮ ವರ್ಷದ ಶುಲ್ಕವಾಗಿ ಪಡೆಯಲು ಅವಕಾಶ ಕಲ್ಪಿಸಿದೆ.

ಈ ಮೊದಲೇ ಶೇ.10 ಶುಲ್ಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ಜತೆಗೆ ಒಪ್ಪಂದವಾಗಿತ್ತು. ಆದರೆ, ಶುಲ್ಕ ನಿಗದಿ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿರಲ್ಲಿಲ್ಲ. ಇದೀಗ ಉನ್ನತ ಶಿಕ್ಷಣ ಇಲಾಖೆಯು ಶುಲ್ಕ ನಿಗದಿ ಮಾಡಿ ಆದೇಶ ಮಾಡಿದೆ.

ಶುಲ್ಕದ ಮಾಹಿತಿ

ಸರ್ಕಾರಿ ಕಾಲೇಜು 42,116

ಖಾಸಗಿ ಕಾಲೇಜು 76,135, 84,596

ಸರ್ಕಾರಿ ಕೋಟಾ 1,86,111

ಕಾಮೆಡ್-ಕೆ 2,61,477