ಬೆಂಗಳೂರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಹತ್ತು ಮಂದಿ ಶಿಕ್ಷಣ ತಜ್ಞರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಶ್ರಾಂತ ಕುಲಪತಿಗಳಾದ ಪ್ರೊ. ಹೆಚ್. ಸಿ. ಬೋರಲಿಂಗಯ್ಯ, ಪ್ರೊ. ಕರಿಸಿದ್ದಪ್ಪ. ಪ್ರೊ. ಕೆಂಪರಾಜು ಟಿ. ಡಿ., ನಿವೃತ್ತ ಕುಲಸಚಿವರಾದ ಪ್ರೊ. ಎಸ್.ಎ. ಪಾಟೀಲ್, ಪ್ರೊ. ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ರಹಮತ್ ತರೀಕೆರೆ, ಪ್ರೊ. ತೆರೇಸಾ ಮಿಥಿಲಾ ವಿನ್ಸೆಂಟ್, ಡಾ. ಎನ್. ನಂದಿನಿ, ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ ಮತ್ತು ಡಾ. ಯತಿರಾಜುಲು ನಾಯ್ಡು ಅವರನ್ನು ನೇಮಕ ಮಾಡಲಾಗಿದೆ.
ಇವರ ಅಧಿಕಾರ ಅವಧಿಯು ಮುಂದಿನ ಐದು ವರ್ಷ ಅಥವಾ ಇವರಿಗೆ 70 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆಧಿಸೂಚನೆ ಹೊರಡಿಸಿದ್ದಾರೆ.