ಬೆಂಗಳೂರು: ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ (
commonwealth games 2026
) ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಕ್ರೀಡಾಪಟು ಕೆ.ಎಸ್. ಶಿಲ್ಪಾ ಅವರನ್ನು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸನ್ಮಾನಿಸಿ, ಅಭಿನಂದಿಸಿದರು. ಈ ವೇಳೆ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 20 ಲಕ್ಷ ರೂ. ನಗದು ಬಹುಮಾನದ ಚೆಕ್ ವಿತರಿಸಲಾಯಿತು. ಅವರಿಗೆ ಈಗಾಗಲೆ ಗ್ರೂಪ್ ಬಿ ಸರ್ಕಾರಿ ನೌಕರಿ ಘೋಷಿಸಲಾಗಿದೆ.
"ಶಿಲ್ಪಾ ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಮತ್ತು ಅವರ ಮುಂದಿನ ಗುರಿಗಳಿಗೆ ಇನ್ನಷ್ಟು ಯಶಸ್ಸು ಸಿಗಲಿ' ಎಂದು ಮುಖ್ಯಮಂತ್ರಿ ಹಾರೈಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ. ಕೆ. ಗೋವಿಂದರಾಜ್ ಮತ್ತು ಶಾಸಕ ರವಿಶಂಕರ್ ಉಪಸ್ಥಿತರಿದ್ದರು.