ನ್ಯೂಸ್

ದಯವಿಟ್ಟು ಇಂಥಾ ಕೆಲಸ ಮಾಡ್ಬೇಡಿ! ಬಳಕೆ ಬಗ್ಗೆ ಅರಿವಿರಲಿ: ನೆಟ್ಟಿಗರಿಗೆ ಸೌತ್​ ಬ್ಯೂಟಿ ಖಡಕ್​ ಕ್ಲಾಸ್​​ | Priyanka Mohan

Priyanka Mohan: ಇತ್ತೀಚೆಗಷ್ಟೇ ತೆರೆಕಂಡ ಪವನ್ ಕಲ್ಯಾಣ್​ ಅಭಿನಯದ 'ಓಜಿ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸೌತ್ ಬ್ಯೂಟಿ ಪ್ರಿಯಾಂಕಾ ಮೋಹನ್, ಒಂದು ವಿಚಾರಕ್ಕೆ ಸಂಬಂಧಿಸಿದಂತೆ​ ಇದೀಗ ನೆಟ್ಟಿಗರಿಗೆ ಖಡಕ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಧ್ವನಿ ಎತ್ತಿದ ಸೌತ್ ಬ್ಯೂಟಿ

ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿರುವುದು ಸಿನಿಪ್ರಿಯರಿಗೆ ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ತಮ್ಮ ಮುಖವನ್ನೇ ಹೋಲುವಂತ ಎಐ ನಿರ್ಮಿತ ಫೋಟೋಗಳನ್ನು ಶೇರ್​ ಮಾಡುತ್ತಿರುವ ನೆಟ್ಟಿಗರು, ಇದು ನಿಜವೇ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಕುರಿತು ಪ್ರಿಯಾಂಕಾ ಗರಂ ಆಗಿದ್ದಾರೆ.

ಖಡಕ್​ ನುಡಿ

ಈ ಕುರಿತಂತೆ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ, "ಒಂದಷ್ಟು ಎಐ ನಿರ್ಮಿತ ಪೋಟೋಗಳು ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿವೆ. ಇಂತಹ ನಕಲಿ ಫೋಟೋ ಮತ್ತು ಸುದ್ದಿಗಳನ್ನು ನಂಬಬೇಡಿ. ದಯವಿಟ್ಟು ಇಂಥಾ ಸುಳ್ಳು ಅಥವಾ ನಕಲಿ ಫೋಟೋ, ವಿಡಿಯೋಗಳನ್ನು ಹರಿಬಿಡಬೇಡಿ. ಇಲ್ಲಿಗೆ ಇದನ್ನೆಲ್ಲ ಬಿಟ್ಟುಬಿಡಿ. ಇದರ ಬಳಕೆಯ ಬಗ್ಗೆ ನಿಮಗೆ ಅರಿವಿರಲಿ. ಎಐ ಒಂದು ಕ್ರಿಯಾತ್ಮಕ ಕೆಲಸಗಳಿಗೆ ಬಳಸಬೇಕೇ ಹೊರತು ತಪ್ಪು ಮಾಹಿತಿಯತ್ತ ಅಲ್ಲ. ನಾವು ಏನು ಕ್ರಿಯೆಟ್​ ಮಾಡ್ತೀವಿ ಮತ್ತು ಯಾವುದನ್ನು ಶೇರ್ ಮಾಡ್ತೀವಿ ಎಂಬುದರ ಬಗ್ಗೆ ಗಮನವಿದ್ದರೆ ಒಳ್ಳೆಯದು" ಎಂದು ಎಚ್ಚರಿಸಿದ್ದಾರೆ.

'ಓಜಿ' ಚಿತ್ರಕ್ಕೆ ಸಿನಿಪ್ರಿಯರಿಂದ ಸಾಧಾರಣ ಪ್ರತಿಕ್ರಿಯೆಗಳು ಲಭಿಸಿದ್ದು, ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಪ್ರಸ್ತುತ, ಕೆವಿನ್​ ಅವರೊಟ್ಟಿಗೆ ಕೈಜೋಡಿಸಿರುವ ಪ್ರಿಯಾಂಕಾ, ತಮಿಳು ಸಿನಿಮಾದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಬೇಕಿದ್ದು, ಕೆನ್​ ರಾಯ್​ಸನ್​ ಅವರ ಚೊಚ್ಚಲ ನಿರ್ದೇಶನ ಎಂದು ಹೇಳಲಾಗಿದೆ. ಇದೇ ನವೆಂಬರ್​ನಿಂದ ಚಿತ್ರೀಕರಣ ಶುರುವಾಗಲಿದೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ,(ಏಜೆನ್ಸೀಸ್). ​