ತಮಿಳುನಾಡು: ತಮಿಳು ಮತ್ತು ತೆಲುಗು ಚಿತ್ರರಂಗದ ಯುವ ನಟಿ ಪ್ರಿಯಾಂಕಾ ಮೋಹನ್ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ತಿಳಿಯಲು ಕಾತರದಿಂದ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಲಭಿಸಿದೆ.
ಪ್ರಸ್ತುತ ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮುಂಬರುವ ಆಕ್ಷನ್-ಥ್ರಿಲ್ಲರ್ ಜಾನರ್ನ 'ದೆ ಕಾಲ್ ಹಿಮ್ ಓಜಿ' ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಬ್ಬ ಸ್ಟಾರ್ ನಟನ ಚಿತ್ರಕ್ಕೆ ಪ್ರಿಯಾಂಕಾ ನಟಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದ ವಲಯಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇತ್ತೀಚಿಗೆ ಕೇಳಿಬಂದ ಮಾಹಿತಿ ಪ್ರಕಾರ, ಪ್ರಿಯಾಂಕಾ ಮೋಹನ್ ಮತ್ತೊಂದು ಬಿಗ್ ಪ್ರಾಜೆಕ್ಟ್ ಪಡೆದುಕೊಂಡಿದ್ದು, ದಳಪತಿ ವಿಜಯ್ ನಟಿಸಲಿರುವ ಮುಂದಿನ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇದ್ದು, ಅವರಲ್ಲಿ ಪ್ರಿಯಾಂಕಾ ಕೂಡ ಒಬ್ಬರು ಎಂದು ಹೇಳಲಾಗಿದೆ. ಶೀಘ್ರವೇ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಲಿದೆ.
ಇದನ್ನೂ ಓದಿ: Bhagwanth Khuba Hits Back At Eshwar Khandre | ಈಶ್ವರ ಖಂಡ್ರೆ ಹೇಳಿಕೆಗೆ ಭಗವಂತ ಖೂಬಾ ತಿರುಗೇಟು! | BIDAR
ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್ ಅವರ 68ನೇ ಚಿತ್ರದಲ್ಲಿ ಪ್ರಥಮ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ತಿಳಿಸಲಾಗಿತ್ತು. ಇದೀಗ ಪ್ರಿಯಾಂಕಾ ಎರಡನೇ ಹೀರೋಯಿನ್ ಎಂದು ಹೇಳಲಾಗಿದೆ,(ಏಜೆನ್ಸೀಸ್).