ನ್ಯೂಸ್

‘ಪ್ಯಾಲೆಸ್ತೀನ್’ ಎಂದು ಬರೆದಿರುವ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಬಂದ Priyanka Gandhi

ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi )ಪ್ಯಾಲೆಸ್ತೀನ್ ಎಂದು ಬರೆದಿರುವ ಚೀಲದೊಂದಿಗೆ ಸಂಸತ್ತಿಗೆ ಬಂದಿದ್ದಾರೆ. ಅವರ ಬ್ಯಾಗ್‌ನಲ್ಲಿ "ಪ್ಯಾಲೆಸ್ತೀನ್" ಎಂದು ಬರೆದಿರುವ ಚಿತ್ರವೊಂದು  ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಪ್ಯಾಲೆಸ್ತೀನ್ ಮೇಲೆ ಕಾಂಗ್ರೆಸ್ ನ ಪ್ರೀತಿ ಮತ್ತೊಮ್ಮೆ ವ್ಯಕ್ತವಾಗಿದೆ. ಪ್ರಿಯಾಂಕಾ ಗಾಂಧಿ ಅವರ ಬ್ಯಾಗ್‌ನಲ್ಲಿ ಪ್ಯಾಲೆಸ್ತೀನ್ ಎಂದು ಬರೆದಿರುವ ಚಿತ್ರ ಹೊರಬಿದ್ದಿದೆ. ಈ ಚೀಲದೊಂದಿಗೆ ಕಾಂಗ್ರೆಸ್ ಸಂಸದರು ಸಂಸತ್ತಿಗೆ ಬಂದಿದ್ದರು. ಇದೀಗ ಈ ಬ್ಯಾಗ್ ವಿಚಾರದಲ್ಲಿ ರಾಜಕೀಯ ಫೈಟ್ ಶುರುವಾಗಿದೆ.

ಪ್ರಿಯಾಂಕಾ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಮುಸ್ಲಿಂ ಮತಗಳನ್ನು ಓಲೈಸಲು ಪ್ರಿಯಾಂಕಾ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ತಂದಿದ್ದಾರೆ ಎಂದು ಕೇಂದ್ರ ಸಚಿವ ಎಸ್ ಪಿ ಸಿಂಗ್ ಬಾಘೇಲ್ ಹೇಳಿದ್ದಾರೆ.

ಈ ಬ್ಯಾಗ್ ಮೂಲಕ ಪ್ರಿಯಾಂಕಾ ಗಾಂಧಿ ಮತ್ತೊಮ್ಮೆ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತಿದ್ದಾರೆ. ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಪ್ಯಾಲೆಸ್ತೀನ್ ರಾಯಭಾರಿ ಅಬೇದ್ ಎಲ್ರಾಜೆಗ್ ಅಬು ಜಾಜರ್ ಅವರನ್ನು ಭೇಟಿಯಾದರು. ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಪ್ರಿಯಾಂಕಾ ಅವರನ್ನು ಪ್ಯಾಲೆಸ್ತೀನ್ ರಾಯಭಾರಿ ಅಭಿನಂದಿಸಿದ್ದಾರೆ.