ನ್ಯೂಸ್

ಪ್ರಿಯಾಂಕಾ ಈ ಕಾರಣಕ್ಕಾಗಿ ಪರಿಣೀತಿ ಮದುವೆಗೆ ಬರಲಿಲ್ಲ; ಮಗಳು, ಅಳಿಯ ಹಾಜರಾಗದಿರುವ ಬಗ್ಗೆ ಉತ್ತರಿಸಿದ ಮಧು ಚೋಪ್ರಾ

ಮುಂಬೈ: ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಯ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಲ್ಲಿತ್ತು. ಕಾರಣ ಪರಿಣೀತಿ ಚೋಪ್ರಾ ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದವರಾದರೆ, ರಾಘವ್ ಚಡ್ಡಾ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪರಿಣೀತಿ-ರಾಘವ್ ಚಡ್ಡಾ ಅವರ ಈ ಮದುವೆಯಲ್ಲಿ, ಮತ್ತೊಬ್ಬರ ಹೆಸರು ಎಲ್ಲರ ಗಮನ ಸೆಳೆದಿತ್ತು. ಅದು ಬೇರಾರೂ ಅಲ್ಲ, ಪರಿಣೀತಿ ಸಹೋದರಿ ಪ್ರಿಯಾಂಕಾ ಚೋಪ್ರಾ. ದೇಸಿ ಹುಡುಗಿ ತನ್ನ ಸಹೋದರಿಯ ಮದುವೆಗೆ ಖಂಡಿತಾ ಬರುತ್ತಾಳೆ ಎಂದು ಅಭಿಮಾನಿಗಳು ಮತ್ತು ಮಾಧ್ಯಮಗಳು ಕಾಯುತ್ತಿದ್ದರು. ಆದರೇಕೆ ಬರಲಿಲ್ಲ ಎಂದು ಸ್ವತಃ ಪ್ರಿಯಾಂಕಾ ತಾಯಿ ಉತ್ತರಿಸಿದ್ದಾರೆ ನೋಡಿ...

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಹಾಗಾಗಿ ಮದುವೆಯಲ್ಲಿ ಅವರು ಭಾಗವಹಿಸುವುದು ಖಚಿತವೆಂದು ಪರಿಗಣಿಸಲಾಗಿತ್ತು. ಆದರೆ, ಪರಿಣೀತಿ ಮದುವೆಗೆ ಪ್ರಿಯಾಂಕಾ ಭಾರತಕ್ಕೆ ಬರುವುದಿಲ್ಲ ಎಂಬ ವರದಿಗಳು ಬಂದಿದ್ದು, ಆ ನಂತರ ಅದು ನಿಜವಾಗಿತ್ತು.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಮದುವೆಯಲ್ಲಿ ಇಡೀ ಕುಟುಂಬ ಭಾಗವಹಿಸಿದ್ದರೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಎಲ್ಲಿಯೂ ಕಾಣಿಸಲಿಲ್ಲ. ಆದ್ದರಿಂದ ಈಗ ಪ್ರಿಯಾಂಕಾ ತಾಯಿ ತನ್ನ ಮಗಳು ಮತ್ತು ಅಳಿಯ ಮದುವೆಗೆ ಏಕೆ ಹಾಜರಾಗಲಿಲ್ಲ ಎಂಬ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ.

ಸೋಮವಾರ, ಮಧು ಚೋಪ್ರಾ ಅವರು ಮಗ ಸಿದ್ಧಾರ್ಥ್ ಚೋಪ್ರಾ ಅವರೊಂದಿಗೆ ವಿಮಾನ ನಿಲ್ದಾಣದ ಹೊರಗೆ ಕಾಣಿಸಿಕೊಂಡರು. ಅಲ್ಲಿ ಪಾಪರಾಜಿಗಳು ಅವರನ್ನು ಸುತ್ತುವರೆದು ಮದುವೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಮೊದಲಿಗೆ, ಮದುವೆ ಹೇಗೆ ನಡೆಯಿತು ಎಂದು ಪಾಪರಜ್ಜಿಗಳು ಕೇಳಿದರು, ಅದಕ್ಕೆ ಮಧು ಚೋಪ್ರಾ "ಬಹಳ ಚೆನ್ನಾಗಿತ್ತು" ಎಂದು ಹೇಳಿದರು.

ಪ್ರಿಯಾಂಕಾ-ನಿಕ್ ಏಕೆ ಹಾಜರಾಗಲಿಲ್ಲ?

ಮುಂದಿನ ಪ್ರಶ್ನೆ ಪ್ರಿಯಾಂಕಾ ಚೋಪ್ರಾ ಮದುವೆಗೆ ಬರದಿರುವ ಬಗ್ಗೆ ಕೇಳಲಾಯಿತು. ಆಗ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಖಚಿತಪಡಿಸಿದರು. ಪರಿಣೀತಿ ಚೋಪ್ರಾ ಅವರ ವಧುವಿನ ನೋಟದ ಬಗ್ಗೆ ಮಧು ಚೋಪ್ರಾ ಅವರನ್ನು ಪ್ರಶ್ನಿಸಿದಾಗ ಈಗಾಗಲೇ ತುಂಬಾ ಸುಂದರವಾಗಿದ್ದಾಳೆ. ಮದುವೆಯಲ್ಲಿ ಇನ್ನೂ ಮುದ್ದಾಗಿ ಕಾಣುತ್ತಿದ್ದಳು ಎಂದು ಹೇಳಿದರು.