ನ್ಯೂಸ್

ನವೀಕರಿಸಿದ ಅಮೆರಿಕಾ ಬಂಗಲೆಗೆ ಪ್ರಿಯಾಂಕಾ ಚೋಪ್ರಾ ದಂಪತಿ.. ಇದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?

ನ್ಯೂಯಾರ್ಕ್​: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಲಾಸ್ ಏಂಜಲೀಸ್​ನಲ್ಲಿ ನವೀಕರಿಸಿದ 1600 ಕೋಟಿ ರೂಪಾಯಿ ಮೌಲ್ಯದ ತಮ್ಮ ಭವನಕ್ಕೆ ತೆರಳಲು ತಯಾರಿ ನಡೆಸಿದ್ದಾರೆ.

ಬಂಗಲೆಯ ನವೀಕರಿಸುವ ಕೆಲಸ ಬಹುತೇಕ ಮುಗಿದಿದೆ. ಇದನ್ನು ಇತ್ತೀಚಿನ ವೈಮಾನಿಕ ಚಿತ್ರಗಳು ದೃಢೀಕರಿಸುತ್ತಿವೆ. ಹೀಗಾಗಿ ಹಾಲಿವುಡ್ ಹಿಲ್ಸ್ ಮ್ಯಾನ್ಷನ್ ಗೆ ಪ್ರಿಯಾಂಕಾ ಮತ್ತು ನಿಕ್ ತಮ್ಮ ಎರಡು ವರ್ಷದ ಮಗಳು ಮಾಲ್ಟಿ ಮೇರಿ ಚೋಪ್ರಾ ಜೊತೆ ಶೀಘ್ರದಲ್ಲೇ ಹೋಗುವುದು ಬಹುತೇಕ ನಿಶ್ಚಿತವಾಗಿದೆ.

ಈ ಜೋಡಿ ಡಿಸೆಂಬರ್ 2018 ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದ ನಂತರ ಲಾಸ್​ ಏಂಜಲೀಸ್​ನಲ್ಲಿ ಬೃಹತ್​ ಬಂಗಲೆ ಖರೀದಿಸಿದ್ದರು. ಇದು ಹಳೆಯ ಬಂಗಲೆಯಾಗಿದ್ದರಿಂದ 2020 ರ ಏಪ್ರಿಲ್‌ನಲ್ಲಿ ದಂಪತಿಗೆ ಪೂಲ್ ಮತ್ತು ಸ್ಪಾ ಕಾಣಿಸಿಕೊಂಡಿದ್ದು 'ಪೋರಸ್ ವಾಟರ್‌ಫ್ರೂಫಿಂಗ್' ನಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗಿತ್ತು. ಇದರ ಜೊತೆಗೆ ಸೋರುವಿಕೆ ಹೆಚ್ಚಾಗಿ ಬಹುತೇಕ ವಾಸಯೋಗ್ಯವಲ್ಲ ಎಂದು ನಿರ್ಧರಿಸಿದರು. ಬಳಿಕ ಅವರು ಮೇ 2023 ರಿಂದ ಈ ಸಂಬಂಧ ಕಾನೂನು ಸಮರ ಸಾರಿದ್ದರು.

ಇತ್ತೀಚೆಗೆ ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡಿದ್ದು, ಬಂಗಲೆ ನವೀಕರಿಸಲಾಗಿದೆ. ಹೀಗಾಗಿ ದಂಪತಿ ಮತ್ತು ಪುತ್ರಿ ಶೀಘ್ರ ನಿವಾಸಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಬಂಗಲೆಯಲ್ಲಿ ಏನೇನಿದೆ?: ಈ ಎಲ್​ಎ ಭವನವು ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನಗೃಹಗಳು, ಒಂದು ಗೌರ್ಮೆಟ್ ಅಡುಗೆಮನೆ, ಹವಾ ನಿಯಂತ್ರಿತ ತಾಪಮಾನದೊಂದಿಗೆ ವೈನ್ ಕೊಠಡಿ, ಒಳಾಂಗಣ ಬಾಸ್ಕೆಟ್‌ಬಾಲ್ ಅಂಕಣ, ಬೌಲಿಂಗ್ ಅಲ್ಲೆ, ಹೋಮ್ ಥಿಯೇಟರ್, ಮನರಂಜನೆಗಾಗಿ ಲಾಂಜ್ ಪ್ರದೇಶ, ಸ್ಪಾ ಜೊತೆಗೆ ಒಂದು ಸ್ಟೀಮ್ ಶವರ್, ಸಂಪೂರ್ಣ ಸುಸಜ್ಜಿತ ಜಿಮ್ ಮತ್ತು ಬಿಲಿಯರ್ಡ್ಸ್ ಕೋಣೆಗಳನ್ನು ಒಳಗೊಂಡಿದೆ.

ಪ್ರಿಯಾಂಕಾ ಮತ್ತು ನಿಕ್ ಜನವರಿ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಳನ್ನು ಪಡೆದರು. ಇತ್ತೀಚೆಗೆ, ಈ ಕುಟುಂಬ ಭಾರತಕ್ಕೆ ಆಗಮಿಸಿದ್ದು, ನೋಯ್ಡಾದಲ್ಲಿ ತಮ್ಮ ಇತರೆ ಕುಟುಂಬ ಸದಸ್ಯರೊಂದಿಗೆ ಹೋಳಿ ಆಚರಿಸಿದರು. ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ಬಾಲರಾಮ ದೇವರ ದರ್ಶನ ಪಡೆದಿದ್ದರು.

ಪ್ರಿಯಾಂಕಾ ಪ್ರಸ್ತುತ ತನ್ನ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ ಹೆಡ್ಸ್ ಆಫ್ ಸ್ಟೇಟ್‌ನ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಹಾಲಿವುಡ್ ನಟರಾದ ಇದ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಸಹ ನಟಿಸಿದ್ದಾರೆ.