Priyanka Chopra Wimbledon 2026 
ನ್ಯೂಸ್

ವಿಂಬಲ್ಡನ್ ಟೆನಿಸ್ ಸಂಭ್ರಮಿಸಿದ ಪ್ರಿಯಾಂಕಾ; ಲೈವ್​​ಮ್ಯಾಚ್ ಮಿಸ್ ಮಾಡ್ಕೊಂಡ ಪತಿಗೆ ವಿಡಿಯೋ ಕಾಲ್ ಮಾಡಿದ ದೇಸಿ ಗರ್ಲ್​..Priyanka Chopra

ಪ್ರಮುಖ ಮುಖ್ಯಾಂಶಗಳು

  • ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯ ವೀಕ್ಷಿಸಿದ ಪ್ರಿಯಾಂಕಾ ಚೋಪ್ರಾ.
  • ಪತಿ ನಿಕ್ ಜೋನಾಸ್ ಅಮೆರಿಕದಲ್ಲಿದ್ದರೂ ವಿಡಿಯೋ ಕಾಲ್ ಮಾಡಿ ನೇರ ದರ್ಶನ ಮಾಡಿಸಿದ ಪ್ರಿಯಾಂಕಾ
  • ಹಳೆಯ ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ 'ಫ್ಯಾಷನ್' ತಾರೆ ಪ್ರಿಯಾಂಕಾ ಚೋಪ್ರಾ.
Priyanka Chopra Joins Hollywood Stars At Wimbledon 2026: ಗ್ಲೋಬಲ್​ ಸ್ಟಾರ್​ ಪ್ರಿಯಾಂಕಾ ಚೋಪ್ರಾ ಅವರು ಲಂಡನ್‌ನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ 2026 ರ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವೇಳೆ ಅಮೆರಿಕದಲ್ಲೇ ಇರುವ ತಮ್ಮ ಪತಿ ಪಾಪ್ ಗಾಯಕ ನಿಕ್ ಜೋನಾಸ್ ವಿಡಿಯೋ ಕಾಲ್​​ನಲ್ಲಿ ಪಂದ್ಯವನ್ನು ಪ್ರದರ್ಶಿಸಿದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋ ಕಾಲ್

ಕಂಟ್ರಿ ಸೈಡ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಕಾರೊಲಿನಾ ಮುಚೋವಾ ಮತ್ತು ಕೋಕೋ ಗೌಫ್ ನಡುವಿನ ರೋಮಾಂಚಕ ಪಂದ್ಯವನ್ನು ವೀಕ್ಷಿಸಲು ಪ್ರಿಯಾಂಕಾ ಚೋಪ್ರಾ ತೆರಳಿದ್ದರು. ಈ ಅದ್ಭುತ ಕ್ರೀಡಾ ಕ್ಷಣಗಳನ್ನು ತಮ್ಮ ಪತಿ ಮಿಸ್ ಮಾಡಿಕೊಳ್ಳಬಾರದು ಎಂದು ಬಯಸಿದ ಅವರು, ನೇರವಾಗಿ ರಾಯಲ್ ಬಾಕ್ಸ್‌ನ ಮುಂಭಾಗದ ಸಾಲಿನಿಂದಲೇ ನಿಕ್ ಜೋನಾಸ್ ಅವರಿಗೆ ವಿಡಿಯೋ ಕಾಲ್​ ಮಾಡಿ ತೋತಿಸಿದ್ದಾರೆ. ಪ್ರಿಯಾಂಕಾ ಅವರ ಈ ಕ್ಯೂಟ್ ನಡೆಗೆ ವಿಂಬಲ್ಡನ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಹೀಗಿತ್ತು ಪ್ರಿಯಾಂಕಾ ಡ್ರೆಸ್ಸಿಂಗ್​ ಸ್ಟೈಲ್
ಭಾರತೀಯ ತಾರೆ ಪ್ರಿಯಾಂಕಾ ಚೋಪ್ರಾ ಅವರು ಈಗ ಫ್ಯಾಷನ್ ಐಕಾನ್. ಪಂದ್ಯ ವೀಕ್ಷಿಸಲು ಅವರು ಧರಿಸಿದ್ದ ಬಟ್ಟೆ ಭಾರಿ ಸದ್ದು ಮಾಡುತ್ತಿದೆ. ಕ್ರೀಮ್ ಬಣ್ಣದ ಮೊಣಕಾಲಿನವರೆಗೂ ಬರುವ ಮಿಡಿ, ಅದಕ್ಕೆ ಮ್ಯಾಚಿಂಗ್ ಆದ ಹೆಡ್‌ಸ್ಕಾರ್ಫ್ ಹಾಗೂ ಕಪ್ಪು ಸನ್‌ಗ್ಲಾಸ್‌ಗಳನ್ನು ಧರಿಸಿ ಕಂಗೊಳಿಸುತ್ತಿದ್ದರು
ವಿಂಬಲ್ಡನ್ 2026 ರ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸಹನಟಿ, ಹಾಲಿವುಡ್ ಸ್ಟಾರ್ ಸಿಂಥಿಯಾ ಎರಿವೋ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಲೇಡಿ ಹೆಲೆನ್ ಟೇಲರ್, ಲಿಲಿ ಜೇಮ್ಸ್, ಡಾರ್ಸಿ ಬುಸ್ಸೆಲ್ ಮತ್ತು ಎಮಿಲಿ ಮೈಟ್ಲಿಸ್ ಸೇರಿದಂತೆ ಜಾಗತಿಕ ಗಣ್ಯರೊಂದಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದರು.
ಇತ್ತೀಚೆಗಷ್ಟೇ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಡಿಯೋರ್ಶೋನಲ್ಲಿ ನಿಕ್ ಜೋನಾಸ್ ಜೊತೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ, ಇದೀಗ ಲಂಡನ್‌ನಲ್ಲಿ ಟೆನ್ನಿಸ್ ಹಬ್ಬವನ್ನು ಆಚರಿಸುತ್ತಿದ್ದಾರೆ, (ಏಜೆನ್ಸೀಸ್).