ನ್ಯೂಸ್

ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

ಮುಂಬೈ: ತಮಿಳು, ತೆಲುಗು, ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್​ ನಟರೊಬ್ಬರಿಗಾಗಿ ಏನು ಬೇಕಾದ್ರೂ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಒಂದೆಡೆ ಶೋ.. ಇನ್ನೊಂದೆಡೆ ವೆಬ್ ಸೀರಿಸ್.. ಇನ್ನೊಂದೆಡೆ ಬಾಲಿವುಡ್ ಸಿನಿಮಾಗಳ ಮೂಲಕ ವೃತ್ತಿ ಬದುಕಿನ ಉತ್ತುಂಗದಲ್ಲಿರುವ ಪ್ರಿಯಾಮಣಿ ಬಾಲಿವುಡ್ ಚಿತ್ರ "ಮೈದಾನ್". ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುಗಾದಿ ಹಬ್ಬದಂದು ಚಿತ್ರ ಬಿಡುಗಡೆಯಾಗಿದ್ದು, ಈ ವೇಳೆ ಅವರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಮಣಿ ಅವರು, ಶಾರುಖ್.. ಕರೆ ಮಾಡಿ ಸಿನಿಮಾ ಮಾಡಿದರೆ.. ಏನು ಬೇಕಾದರೂ ಬಿಟ್ಟು ಅವರ ಬಳಿ ಹೋಗುತ್ತೇನೆ. ಅವರ ಜತೆ ಕೆಲಸ ಮಾಡಲು ನಾನು ಸಿದ್ಧವಾಗಿದ್ದೇನೆ ಎಂದು ಉತ್ತರಿಸಿದರು. ನಟಿಯ ಈ ಹೇಳಿಕೆ ಈಗ ವೈರಲ್ ಆಗಿದೆ.

2023 ರ ಬ್ಲಾಕ್‌ಬಸ್ಟರ್ 'ಜವಾನ್' ನಲ್ಲಿ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಲು 'ಎಲ್ಲವನ್ನೂ ಬಿಟ್ಟುಕೊಡಲು' ಸಿದ್ಧ ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಈ ಮೂಲಕವಾಗಿ ನಟಿ ನಾನು ಅವರ ಜತೆ ಮತ್ತೆ ಸಿನಿಮಾ ಮಾಡಲು ಸಿದ್ಧವಾಗಿದ್ದೆನೆಂದು ಹೇಳಿದ್ದಾಳೆ.

ನಟಿ ಪ್ರಸ್ತುತ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಅವರ 'ಜವಾನ್', 'ಆರ್ಟಿಕಲ್ 370' ಅಥವಾ ಬಹುನಿರೀಕ್ಷಿತ 'ಮೈದಾನ್​' ಸಿನಿಮಾ ಮೂಲಕವಾಗಿ ಪ್ರಿಯಾಮಣಿ ತನ್ನನ್ನು ಸಾಬೀತುಪಡಿಸಿದ್ದಾರೆ.

ರೋಹಿತ್ ಶೆಟ್ಟಿ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ 'ಒನ್ ಟೂ ತ್ರೀ ಫೋರ್' ಹಾಡಿನಲ್ಲಿ ಶಾರುಖ್ ಖಾನ್ ಜತೆ ಮೊದಲ ಬಾರಿಗೆ ಪ್ರಿಯಾಮಣಿ ತೆರೆಯ ಮೇಲೆ ಕಾಣಿಸಿಕೊಂಡರು ಮತ್ತು ನಂತರ ಅವರು ಅಟ್ಲೀ ಅವರ 'ಜವಾನ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಮತ್ತೆ ಶಾರುಖ್​​ ಅವರ ಜತೆ ತೆರೆ ಮೇಲೆ ಪ್ರಿಯಾಮಣಿ ಅವರು ಕಾಣಿಸಿಕೊಳ್ಳುತ್ತಾರಾ? ಎಂದು ಕಾದು ನೋಡಬೇಕಾಗಿದೆ.