ನ್ಯೂಸ್

ಖಾಸಗಿ ವಾಹನ ಮಾಲೀಕರಿಗೆ ಗುಡ್​ನ್ಯೂಸ್; ದಾಖಲಾತಿ ಸಿಂಧುತ್ವ ಅವಧಿ ಮೂರು ತಿಂಗಳ ವಿಸ್ತರಣೆ

ಬೆಂಗಳೂರು: ಕರೋನ ಎರಡನೇ ಅಲೆಯ ಸಂಕಷ್ಟದಲ್ಲಿ ಇರುವ ಖಾಸಗಿ ವಾಹನ ಮಾಲೀಕರ ಹಿತದೃಷ್ಟಿಯಿಂದ ವಾಹನಗಳ ದಾಖಲಾತಿಗಳ ಸಿಂಧುತ್ವ ಅವಧಿಯನ್ನು ಮುಂದಿನ ಮೂರು ತಿಂಗಳು ವಿಸ್ತರಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ಮೋಟಾರು ವಾಹನ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ಅಡಿಯಲ್ಲಿ ವಿತರಿಸಿರುವ ದಾಖಲೆಗಳ ಪೈಕಿ 2020ರ ಫೆ.1ರಿಂದ ಸಿಂಧುತ್ವ (ವ್ಯಾಲಿಡಿಟಿ) ಮುಕ್ತಾಯಗೊಂಡಿರುವಂಥ ದಾಖಲಾತಿಗಳಿಗೆ ಸೀಮಿತವಾಗಿ ಸಿಂಧುತ್ವ ಅವಧಿಯನ್ನು 2021ರ ಜೂನ್ 30ರವರೆಗೂ ವಿಸ್ತರಿಸಲಾಗಿದೆ.