ರಾಣೆಬೆನ್ನೂರ: ಸರ್ಕಾರಿ ನಿಯಮ ಮೀರಿ ಡೊನೇಷನ್ ವಸೂಲಿ ಮಾಡುತ್ತಿರುವ ರಾಣೆಬೆನ್ನೂರಿನ ಎಚ್.ಎಸ್.ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಜರುಗಿಸಬೇಕು. ನಿಯಮಾವಳಿ ಪ್ರಕಾರ ವಿದ್ಯಾಥಿರ್ಗಳಿಗೆ ವರ್ಗಾವಣೆ ಪತ್ರ (ಟಿಸಿ) ಕೊಡಬೇಕು ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ತಾಲೂಕು ಸಮಿತಿಯ ಕಾರ್ಯಕರ್ತರು ಶುಕ್ರವಾರ ಡಿಡಿಪಿಯು ಉಮೇಶಪ್ಪ ಎಚ್. ಅವರಿಗೆ ಮನವಿ ಸಲ್ಲಿಸಿದರು.
ಸಂಟನೆಯ ಜಿಲ್ಲಾ ಕಾರ್ಯದಶಿರ್ ಬಸವರಾಜ ಮಾತನಾಡಿ, ರಾಣೆಬೆನ್ನೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಎಚ್.ಎಸ್.ಬಿ ಪಿಯು ಕಾಲೇಜ್ನಲ್ಲಿ ವಿಜ್ಞಾನ ವಿಭಾಗ ನಡೆಸುತ್ತಿದ್ದು, 18 ವಿದ್ಯಾಥಿರ್ಗಳನ್ನು ದಾಖಲಾತಿ ಮಾಡಿಕೊಂಡಿದೆ. ಕಾಕೋಳ ಗ್ರಾಮದ ವಿದ್ಯಾಥಿರ್ನಿ ಸಹನಾ ಅಡಿವೇರ ಕಲಾ ವಿಭಾಗಕ್ಕೆ ಸೇರಬೇಕು ಎಂದು ವಿಚಾರಿಸಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಆಸೆ ಆಕಾಂಕ್ಷೆಗಳನ್ನು ತೋರಿಸಿ ವಿಜ್ಞಾನ ವಿಭಾಗಕ್ಕೆ 10 ಸಾವಿರ ರೂ. ಶುಲ್ಕ ಕಟ್ಟಿಸಿಕೊಂಡು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆದರೆ, ವಿದ್ಯಾಥಿರ್ನಿ ಕೆಲವು ದಿನಗಳ ಕಾಲ ತರಗತಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ. ಕಲಾ ವಿಭಾಗಕ್ಕೆ ಹೋಗುತ್ತೇನೆ. ವರ್ಗಾವಣೆ ಪತ್ರ (ಟಿ.ಸಿ) ಹಾಗೂ ಕಟ್ಟಿದ ಶುಲ್ಕ ವಾಪಸ್ ಕೊಡಿ ಎಂದು ಹೇಳಿದ್ದಾಳೆ.
ಆದರೆ, ಆಡಳಿತ ಮಂಡಳಿಯು ವಿದ್ಯಾಥಿರ್ನಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಕಾರಣಕ್ಕೂ ವರ್ಗಾವಣೆ ಪತ್ರ ಕೊಡಲು ಸಾಧ್ಯವಿಲ್ಲ. ಕೂಡಲೇ ಬಾಕಿ ಉಳಿದ 25 ಸಾವಿರ ರೂ. ಶುಲ್ಕ ತುಂಬಬೇಕು ಹಾಗೂ ವರ್ಗಾವಣೆ ಪತ್ರವನ್ನು ಇನ್ನೂ ಒಂದು ತಿಂಗಳ ನಂತರ ಬೆಂಗಳೂರಿನ ಪಿಯು ಬೋರ್ಡ್ಗೆ ಅಜಿರ್ ಹಾಕಿ ದಂಡ ತುಂಬಿ ಪಡೆದುಕೊಳ್ಳಬೇಕು ಎಂದು ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆ.
ಆದ್ದರಿಂದ ಕೂಡಲೇ ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಂಡು ವಿದ್ಯಾಥಿರ್ನಿಗೆ ಕಲಾ ವಿಭಾಗದಲ್ಲಿ ಕಲಿಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮುಂದಿನ 15 ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಡಿಡಿಪಿಯು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಸುಲೇಮಾನ್ ಮತ್ತಿಹಳ್ಳಿ, ಮುತ್ತುರಾಜ ದೊಡ್ಡಮನಿ, ಮರೆಪ್ಪ ಮ್ಯಾಗಳಮನಿ, ವಿದ್ಯಾಥಿರ್ನಿ ಸಹನಾ ಅಡಿವೇರ್, ಪಾಲಕರಾದ ಮಾಲತೇಶ ಅಡಿವೇರ್, ಸಾವಿತ್ರಾ ಅಡಿವೇರ ಮತ್ತಿತರರು ಉಪಸ್ಥಿತರಿದ್ದರು.