ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ನಿವಾಸವನ್ನು ತಾತ್ಕಾಲಿಕವಾಗಿ ಗುರುಗ್ರಾಮಕ್ಕೆ ಬದಲಾಯಿಸಿದ್ದಾರೆ. ಪತಿ ರಾಬರ್ಟ್ ವಾದ್ರಾ ಒಡೆತನದ ಪೆಂಟ್ಹೌಸ್ಗೆ ಅವರು ಶುಕ್ರವಾರ ಸ್ಥಳಾಂತರಗೊಂಡರು.
ಗುರುಗ್ರಾಮದ ಸೆಕ್ಟರ್ 43ರಲ್ಲಿ ಈ ಬಂಗಲೆಯಿದೆ. ದೆಹಲಿಯಲ್ಲಿರುವ ಸರ್ಕಾರಿ ಬಂಗಲೆ ತೊರೆದ ನಂತರ ಅವರು ಗುರುಗ್ರಾಮದ ಭವ್ಯ ಮನೆಯಲ್ಲೇ ವಾಸಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಪ್ರಿಯಾಂಕಾ ಖಾಲಿ ಮಾಡಿದ್ದಾರೆ. ಅದೇ ಪ್ರದೇಶದಲಿ ್ಲ ಇನ್ನೊಂದು ಮನೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಆ ನಿವಾಸದ ರಿಪೇರಿ ನಡೆಯುತ್ತಿರುವುದರಿಂದ ಗುರುಗ್ರಾಮದಲ್ಲಿರುವ ಮನೆಯಲ್ಲಿ ಕುಟುಂಬದೊಂದಿಗೆ ಕೆಲ ಕಾಲ ವಾಸಿಸಲು ನಿರ್ಧರಿಸಿದ್ದಾರೆ.
ಮನೆ ದುರಸ್ತಿಗೆ ಸುಮಾರು ಮೂರು ತಿಂಗಳು ಬೇಕಾಗಬಹುದೆಂದು ಮೂಲಗಳು ಹೇಳಿವೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ಇತ್ತೀಚೆಗೆ ಸರ್ಕಾರ ಸೂಚನೆ ನೀಡಿತ್ತು.