ನ್ಯೂಸ್

ಜೀವನದ ಮೈಲುಗಲ್ಲನ್ನು ಪ್ರತಿಯೊಬ್ಬರೂ ಸಾಗಬೇಕು; ಶಿವಣ್ಣನವರ

Haveri - Kariyappa Aralikatti

ರಾಣೆಬೆನ್ನೂರ: ಸೇವಾ ಅವಧಿಯಲ್ಲಿ ನಿವೃತ್ತಿ ಅನಿವಾರ್ಯವಾಗಿದೆ. ಜೀವನದ ಮೈಲುಗಲ್ಲನ್ನು ಪ್ರತಿಯೊಬ್ಬರು ಸಾಗಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಶ್ರೀ ಅರಳಿ ಸಿದ್ದಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಶನಿವಾರ ಪ್ರಾಚಾರ್ಯ ಆರ್​.ಎಫ್​. ಅಯ್ಯನಗೌಡ್ರ ಅವರು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜ್​ ಶಿಕ್ಷಣ ಇಲಾಖೆಯಲ್ಲಿ ಸುಮಾರು 34 ವರ್ಷ ಸೇವೆ ಸಲ್ಲಿಸಿದ ಪ್ರಾಚಾರ್ಯ ಅಯ್ಯನಗೌಡ್ರ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ಅವಧಿಯಲ್ಲಿ ಕಾಲೇಜ್​ ಬಹಳಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ. ಇಂತಹ ವ್ಯಕ್ತಿಗಳ ಸೇವೆ ಅಮೂಲ್ಯವಾಗಿದ್ದು, ನಿವೃತ್ತಿ ನಂತರ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್​.ಟಿ.ಬಾಗಲಕೋಟಿ, ಕಾಲೇಜ್​ ಅಭಿವೃದ್ಧಿ ಸದಸ್ಯ ಬಸವರಾಜ ಕಾರಗಿ, ಮಹದೇವಪ್ಪ ನಾರಜ್ಜಿ, ಚನ್ನಬಸಪ್ಪ ನಾಡಿಗೇರ, ಸಂತೋಷ ಹೆಡ್ಡನವರ, ಸಾಂಸತಿಕ ವಿಭಾಗದ ಸಂಚಾಲಕ ಡಾ.ಎಸ್​.ಪಿ.ಗೌಡರ, ಅಂಬಿಕಾ ಹೊಸಮನಿ, ಡಾ.ಬಸವರಾಜ ಹುಗ್ಗಿ, ಡಾ.ಹನುಮಂತರಾಜು ಎನ್​.ಬಿ., ರವಿಕುಮಾರ, ಲೋಹಿಯಾ ಕೆಜಿಆರ್​., ಹನುಮಂತರಾಜ ಎನ್​.ಬಿ., ಡಾ.ರವಿ..ಎಂ., ಕಚೇರಿ ಅಧಿಕ್ಷಕ ಸತೀಶ ಎಂ., ಇತರರಿದ್ದರು.