ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಕಾರ್ಯಕ್ರಮಗಳನ್ನು ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ತುಮಕೂರು ಹೆಲಿಪ್ಯಾಡ್ನಿಂದ ಅವರು ಹೆಲಿಕಾಪ್ಟರ್ನಲ್ಲಿ ನಗರಕ್ಕೆ ಆಗಮಿಸಿದರು.
ಮೊದಲನೇ ಹೆಲಿಕಾಪ್ಟರ್ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯಡಿಯೂರಪ್ಪ ಮಾತ್ರ ಪ್ರಯಾಣ ಬೆಳೆಸಿದರು.
ಎರಡನೇ ಹೆಲಿಕಾಪ್ಟರ್ನಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಷಿ ಹಾಗೂ ಮೂರನೇ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಕಚೇರಿ ಅಧಿಕಾರಿಗಳು ತೆರಳಿದರು.