ಬೆಂಗಳೂರು: ಇಂದು ಮಾರುಕಟ್ಟೆಯಲ್ಲಿ ಸೊಪ್ಪು- ತರಕಾರಿ ಬೆಲೆ ಏರಿದ್ದು ಜನರು ದಿನ ಬಳಕೆಗೆ ಬೇಕಾದದ್ದನ್ನು ಖರೀದಿಸಲು ಕಷ್ಟಪಡುತ್ತಿದ್ದಾರೆ. ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬು ಸುಡುತ್ತಿದ್ದು ಕಂಗಾಲಾಗಿದ್ದಾರೆ.
ಮಳೆಯಿಂದಾಗಿ ಬೆಂಗಳೂರಿಗೆ ಸರಿಯಾಗಿ ತರಕಾರಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಈ ಸಮಸ್ಯೆ ತಲೆದೋರಿದೆ ಎನ್ನಲಾಗಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ತರಕಾರಿಯ ಅಲಭ್ಯತೆ ಉಂಟಾಗಿದ್ದು ಅವುಗಳ ಬೆಲೆಯೂ ಮಾರುಕಟ್ಟೆಯಲ್ಲಿ ಏರಿದೆ.
ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? (ಕೆ.ಜಿ ಲೆಕ್ಕದಲ್ಲಿ)
- ಹುರಳಿಕಾಳು - 125
- ಬದನೆಕಾಯಿ- 65
- ಸೌತೆಕಾಯಿ- 80
- ಡಬ್ಬಲ್ ಬೀನ್ಸ್- 240
- ಬಟಾಣಿ -198
- ನುಗ್ಗೇಕಾಯಿ- 65
- ನವಿಲಿಕೋಸು- 108
- ಅವರೇಬೇಳೆ - 375
- ಹಸಿಮೆಣಸಿನಕಾಯಿ- 155
- ಬೆಂಡೆಕಾಯಿ- 56
- ಶುಂಠಿ -275
- ಬೆಳ್ಳುಳ್ಳಿ - 176
- ಸಬ್ಬಕ್ಕಿ/ನುಗ್ಗೆ ಸೊಪ್ಪು - 120
- ಕೊತ್ತಂಬರಿ ಸೊಪ್ಪು - 110
- ಕೆಂಪು ಎಲೆಕೋಸು - 110
- ಕ್ಯಾರೆಟ್- 99
- ಹೆಸರು ಮೊಳಕೆ ಕಾಳು - 100
- ಕರಿಬೇವು -65
- ಟೋಮೊಟೋ - 95
- ಸುವರ್ಣಗಡ್ಡೆ -_75
- ಹಾಗಲಕಾಯಿ- 60