ನ್ಯೂಸ್

ಕಾನೂನು ಅನುಷ್ಠಾನವಾದರೆ ಅನಾಹುತಕ್ಕೆ ತಡೆ

ಕೋಲಾರ: ಯಾವುದೇ ಇಲಾಖೆಯಿಂದ ಮಾಡುವ ಕೆಲಸ ಅರ್ಥಪೂರ್ಣವಾಗಿರಬೇಕು. ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿ ಜಾರಿಯಾಗಿರುವ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಾಗ ಸಂಭವಿಸುವ ಅನಾಹುತಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ವಿವಿಧ ಅಯಾಮಗಳ ಕುರಿತು ಜಿಲ್ಲಾಮಟ್ಟದ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಇಲಾಖೆಯ ಅಧಿಕಾರಿಗಳು ಸಭೆಗಳಲ್ಲಿ ಕಾಟಾಚಾರಕ್ಕೆ ಪ್ರೋಸಿಡಿಂಗ್ಸ್ ವಾಡಬಾರದು. ವಾಡುವ ಕೆಲಸ ಅರ್ಥಪೂರ್ಣವಾಗಿ ಇರಬೇಕು. ಹಲವು ಸಭೆಗಳನ್ನು ವಾಡುತ್ತೇವೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಉದ್ದೇಶ ಮರೆತಿರುತ್ತಾರೆ. ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಾನೂನುಗಳ ಸೆಕ್ಷನ್ ಬಗ್ಗೆ ವಾಹಿತಿ ಹೊಂದಿರಬೇಕು. ಕಾನೂನುಗಳನ್ನು ಬಳಕೆ ವಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಬಾಲಾ ನ್ಯಾಯ, ಫೋಕ್ಸೊ ಕಾಯ್ದೆಗಳು ಬಹಳ ಬಲಿಷ್ಠವಾಗಿದ್ದರೂ ಕೆಲ ಸಂದರ್ಭಗಳಲ್ಲಿ ಮಹಿಳೆಯರ, ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಯಂತ ಪ್ರಕರಣಗಳು ನಡೆಯುತ್ತಿವೆ ಎಂದರೆ ಅರಿವಿನ ಕೊರತೆ ಇದೆ ಎಂದು ಅರ್ಥ. ಇತ್ತೀಚಿನ ದಿನಗಳಲ್ಲಿ ಸವಾಜದಲ್ಲಿ ಆಗುತ್ತಿರುವ ಟನೆಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಪಾಲನಾ ಸಂಸ್ಥೆಗಳು, ಬಾಲಮಂದಿರ ಹೀಗೆ ಅನೇಕ ಸಮಿತಿಗಳಿದ್ದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮುನಿ ಮಾತನಾಡಿ, ನಿರಂತರವಾಗಿ ಕಾನೂನುಗಳು ಉಲ್ಲಂನೆಯಾಗುವುದು ಅಂತಕಕಾರಿ ಬೆಳವಣಿಗೆ ಎಂದು ವಿಷಾದಿಸಿದರು. ಇತ್ತೀಚಿಗೆ ಕೋಲಾರದ ನಡೆದ ಟನೆಗಳನ್ನು ಗಮನಿಸಿದರೆ ಕರ್ತವ್ಯವನ್ನು ನಿಭಾಹಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಭಾವನೆ ಕಾಡುತ್ತಿದೆ. ಬಾಲ ಮಂದಿರ, ಮಕ್ಕಳ ಸಮಿತಿಗಳು ರಚನೆಯಾಗಿದ್ದರು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದೇವೆ. ಮಕ್ಕಳ ಬೆಳವಣಿಗೆ, ವಾದಕ ವಸ್ತುಗಳ ಸೇವನೆ, ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ನಿರ್ಮೂಲನೆ ಜವಾಬ್ದಾರಿ ಕೇವಲ ಇಲಾಖೆಯ ಮೇಲಿಲ್ಲ. ಇತರ ಇಲಾಖೆಗಳ ಪಾತ್ರವು ಪ್ರಮುಖ. ಕೆಲಸವನ್ನು ಇಚ್ಛೆಯಿಂದ ವಾಡಬೇಕು, ಅದು ಬಿಟ್ಟು ಭಾನುವಾರ, ಸರ್ಕಾರಿ ರಜೆಯಿದೆ ಎಂದು ಉದಾಸೀನ ತೋರಬಾರದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮಾತನಾಡಿ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಕೊಳ್ಳುತ್ತೇವೆ ಎಂದರೆ ಎಲ್ಲೊ ಒಂದು ಕಡೆ ಸಮಸ್ಯೆ ಇದೆ ಎಂಬ ಭಾವನೆ ವ್ಯಕ್ತವಾಗುತ್ತದೆ. ವಿದ್ಯಾರ್ಥಿ ಕಾರ್ತಿಕ್ ಸಿಂಗ್‌ನನ್ನು ಕೊಲೆ ವಾಡಿರುವುದು ಅಪ್ರಾಪ್ತರೇ. ಅತಿಯಾಗಿ ಮದ್ಯ ಸೇವನೆ ವಾಡಿ, ಕೆಟ್ಟ ಸಹವಾಸದಿಂದ ಈ ಕೃತ್ಯ ಸಂಭವಿಸಿದೆ. ಇಂತಹ ಪ್ರಕರಣಗಳು ಮರುಕಳುಹಿಸದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದರು.
ಸವಾಜದಲ್ಲಿ ಕೃತ್ಯ ಸಂಭವಿಸಿದರೆ ಎಂದರೆ ಜಿಲ್ಲಾಡಳಿತ, ಶಾಲೆ, ಸವಾಜ, ಪೊಲೀಸ್ ಇಲಾಖೆ ಎಡವಿದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ರಕ್ಷಣೆ ವಿಚಾರದಲ್ಲಿ ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಪೊಲೀಸ್ ಇಲಾಖೆ ಅನುಷ್ಠಾನಕ್ಕೆ ತರುವಲ್ಲಿ ಮಂಚೂಣಿಯಲ್ಲಿದೆ. ಕಾನೂನು ಉಲ್ಲಂನೆ ಮುಂಚೆಯೇ ಮಕ್ಕಳನ್ನು ಪಾಲಕರು, ಶಿಕ್ಷಕರು ಜಾಗೃತರನ್ನಾಗಿ ವಾಡಬೇಕು. ಇಲಾಖಾಧಿಕಾರಿಗಳು ಪೊಲೀಸರ ನೆರವಿಗಾಗಿ ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ಪಿಯು ಡಿಡಿ ರಾಮಚಂದ್ರಪ್ಪ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು, ರಾಜ್ಯ ಉನ್ನತ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ ಮತ್ತಿತರರು ಪಾಲ್ಗೊಂಡಿದ್ದರು.