ಶಿವಮೊಗ್ಗ: ಹೆತ್ತ ತಾಯಿಯಂತೆಯೇ ನಮ್ಮೆಲ್ಲರನ್ನೂ ಹೊತ್ತು ಸಲುಹುವ ಭೂಮಿ ತಾಯಿಗೂ ನಾವು ಮಹತ್ವ ನೀಡಬೇಕು. ಮಾಲಿನ್ಯವನ್ನು ತಡೆಗಟ್ಟಿ ಪರಿಸರ ಸಂರಕ್ಷಿಸುವ ಮೂಲಕ ಭೂತಾಯಿಯ ಋಣ ತೀರಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಈಶ್ವರವನ ಚಾರಿಟಬಲ್ ಟ್ರಸ್ಟ್ ಹಾಗೂ ಪರೋಪಕಾರಂನಿಂದ ಮಂಗಳವಾರ ಅಬ್ಬಲಗೆರೆ ಬಳಿಯ ಈಶ್ವರವನದಲ್ಲಿ ಏರ್ಪಡಿಸಿದ್ದ ಭೂಮಿ ಹುಣ್ಣಿಮೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜಮುಖಿ, ಸಕಾರಾತ್ಮಕ ಚಿಂತನೆ ಹೊಂದಿರುವ ಪರೋಪಕಾರಂ ಕುಟುಂಬದವರು ಜಾತಿ, ಮತ ಭೇದವಿಲ್ಲದೆ ಮಾನವೀಯ ಮೌಲ್ಯ, ಸಂಬಂಧಗಳನ್ನು ಬಲಪಡಿಸಲು ಸಾಮೂಹಿಕವಾಗಿ ಭೂಮಿ ಹುಣ್ಣಿಮೆ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ ನಾಗೇಶ್, ಉಪಾಧ್ಯಕ್ಷೆ ಶಶಿಕಲಾ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಶಾಲಿನಿ ಕಾಂತೇಶ್, ಜಯಲಕ್ಷ್ಮೀ ಈಶ್ವರಪ್ಪ, ಎನ್.ಎಂ.ಶ್ರೀಧರ್, ಪ್ರಕಾಶ್, ನಾಗರಾಜ್ ಶೆಟ್ಟರ್, ದೀಪಾ ಶೆಟ್ಟರ್, ಅನಿಲ್ ಹೆಗ್ಗಡೆ, ದೀಪಾ ಶ್ರೀಧರ್ ಇತರರಿದ್ದರು.