ಬೆಂಗಳೂರು: ಇಬ್ಬರು ಎಡಿಜಿಪಿ ಸೇರಿ ರಾಜ್ಯದ 21 ಪೊಲೀಸ್ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡಮಾಡುವ ರಾಷ್ಟ್ರಪತಿಗಳ ವಿಶಿಷ್ಟ ಹಾಗೂ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ವಿಶಿಷ್ಟ ಸೇವಾ ಪದಕ: ಸಿಐಡಿ ಆರ್ಥಿಕ ಅಪರಾಧಗಳ ಎಡಿಜಿಪಿ ಉಮೇಶ್ ಕುಮಾರ್, ಆಂತರಿಕ ಭದ್ರತೆ ವಿಭಾಗ ಎಡಿಜಿಪಿ ಅರುಣ್ ಚಕ್ರವರ್ತಿ. ಶ್ಲಾಘನೀಯ ಸೇವಾ ಪದಕ: ಬೆಂಗಳೂರಿನ ಕೆಎಸ್ಆರ್ಪಿಯ 3ನೇ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್,
ಮಲ್ಲೇಶ್ವರ ಉಪವಿಭಾಗ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗ ಎಸಿಪಿ ಪಿ.ರವಿ, ರಾಜ್ಯ ಗುಪ್ತವಾರ್ತೆ ವಿಭಾಗ ಡಿವೈಎಸ್ಪಿ ನವೀನ್ ಕುಲಕರ್ಣಿ, ಬೆಂ.ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಸಿದ್ದರಾಜು, ಎಸಿಬಿ ಇನ್ಸ್ಪೆಕ್ಟರ್ ಎನ್.ಜೆ.ದಯಾನಂದ್, ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿ ಕಂಗ್ರಳ್ಳಿ ಕೆಎಸ್ಆರ್ಪಿ ತರಬೇತಿ ಶಾಲೆಯ ಸ್ಪೆಷಲ್ ಆರ್ಎಸ್ಐ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಪಿಎಸ್ಐ ಎಸ್.ಇ.ಗೀತಾ, ಕೆಎಸ್ಆರ್ಪಿ 3ನೇ ಬೆಟಾಲಿಯನ್ವಿಶೇಷ ಎಆರ್ಎಸ್ಐ ಡಿ.ಎಸ್.ಗೋವರ್ಧನರಾವ್, ಮಂಗಳೂರು ನಗರದ ಸೈಬರ್ ಕ್ರೖೆಂ ಠಾಣೆಯ ಎಎಸ್ಐ ಮೋಹನ್, ಬೆಂಗಳೂರಿನ ವೈರ್ಲೆಸ್ ವಿಭಾಗದ ಎಎಸ್ಐ ರಾಮನಾಯಕ್, ತುಮಕೂರಿನ ಜಯನಗರ ಠಾಣೆ ಹೆಡ್ಕಾನ್ಸ್ಟೆಬಲ್ ಮೊಹಮದ್ ಮುನಾವರ್ ಪಾಷಾ, ಬೆಂಗಳೂರಿನ ಕೆಎಸ್ಆರ್ಪಿ 4ನೇ ಬೆಟಾಲಿಯನ್ ವಿಶೇಷ ಆರ್ಎಚ್ಸಿ ಎಸ್.ಪಿ. ಕೆರುಟಗಿ, ಬಳ್ಳಾರಿ ಡಿಎಆರ್ ಎಎಚ್ಸಿ ದಾದಾ ಅಮೀರ್, ಯಲಹಂಕ ಎಪಿಟಿಎಸ್ನ ಎಎಚ್ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್ಸಿ ಆರ್.ಕುಮಾರ್, ಬೆಂಗಳೂರು ಕೆಎಸ್ಆರ್ಪಿ 3ನೇ ಬೆಟಾಲಿಯನ್ ಸ್ಪೆಷಲ್ ಆರ್ಎಚ್ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ-ಧಾರವಾಡದ ಸಿಸಿಆರ್ಬಿ ಸಿಎಚ್ಸಿ ಗೋಪಾಲಪ್ಪ ದೇವೇಂದ್ರಪ್ಪ ಕೊಟಬಾಗಿ.