ನ್ಯೂಸ್

'ಈ ವಿಡಿಯೋ ನನ್ನ ಪಾಲಿಗೆ ಅತ್ಯಮೂಲ್ಯವಾದದ್ದು ಚಿರು..❤️': ಧ್ರುವ ಸರ್ಜಾ ಪತ್ನಿ ಪ್ರೇರಣಾರ ಭಾವುಕ ಪೋಸ್ಟ್​

ನಟ ಚಿರಂಜೀವಿ ಸರ್ಜಾ ಸಾವಿನ ನೋವಿನಿಂದ ಅವರ ಕುಟುಂಬಕ್ಕೆ, ಆತ್ಮೀಯರಿಗೆ, ಸ್ನೇಹಿತರಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಅದು ಸಹಜವೂ ಕೂಡ. ಚಿರುಗೆ 35 ವರ್ಷವಷ್ಟೇ. ಪ್ರೀತಿಸಿದ ಮೇಘನಾರನ್ನು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು.

ಚಿರು ಅವರದ್ದು ತುಂಬು ಕುಟುಂಬ. ಅನ್ಯೋನ್ಯತೆ, ಪ್ರೀತಿ ತುಂಬಿದ ಕುಟುಂಬ ಅದು. ಅಲ್ಲಿಂದ ಒಂದು ಕುಡಿ ಕಳಚಿದೆ. ಉಳಿದವರು ಚಿರು ನೆನಪಿನಿಂದ ಹೊರಬರಲಾರದೆ ಸಂಕಟಪಡುತ್ತಿದ್ದಾರೆ. ಧ್ರುವ ಸರ್ಜಾ ಅವರಂತೂ ತನ್ನ ತಾಯಿಯಂತಿದ್ದ ಅಣ್ಣನ ಫೋಟೋವನ್ನು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ತಾವು ಚಿರು ಅವರೊಂದಿಗೆ ಫನ್ನಿಯಾಗಿ ಡ್ಯಾನ್ಸ್​ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಪ್ರೇರಣಾ ಹಾಗೂ ಚಿರು ಅವರು ತುಂಬ ಕ್ಯೂಟ್​ ಆಗಿ, ಫನ್ನಿಯಾಗಿ ಡ್ಯಾನ್ಸ್​ ಮಾಡುವುನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ಹಳೇ ವಿಡಿಯೋವನ್ನು ಶೇರ್​ ಮಾಡಿರುಕೊಂಡಿರುವ ಪ್ರೇರಣಾ, ನಾವು ಈ ವಿಡಿಯೋವನ್ನು ಫನ್​ಗಾಗಿ ಮಾಡಿದ್ದೆವು. ನಾನಿದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಯಾವಾಗಲೂ ಅಂದುಕೊಂಡಿರಲಿಲ್ಲ. ಆದರೆ ಈಗ ನನ್ನ ಬಳಿ ಇರುವ ಎಲ್ಲ ವಿಡಿಯೋಗಳಿಗಿಂತ ಇದೇ ಅತ್ಯಮೂಲ್ಯವಾದ ವಿಡಿಯೋ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಅಲ್ಲದೆ ಹಾರ್ಟ್ ಸಿಂಬಲ್​ ಹಾಕಿ ಚಿರು ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ ಬಾವನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.