ನ್ಯೂಸ್

ಕೆಲವೇ ನಿಮಿಷಗಳಲ್ಲಿ ತಯಾರಿಸಿ ಓಟ್ಸ್​ ಕುಕ್ಕೀಸ್​! Recipe

Recipe: ಇಂದಿನ ದಿನಗಳಲ್ಲಿ ಅನೇಕರು ಮಾರುಕಟ್ಟೆಯಲ್ಲಿ ಸಿಗುವಂತಹ ವಿವಿಧ ಓಟ್ಸ್​ ಕುಕೀಸ್​ ಗಳ ಮಾರು ಹೋಗುತ್ತಿದ್ದಾರೆ. ಇನ್ನು ಕೆಲವೊಬ್ಬರು ಬಿಸ್ಕತ್​ ಸೇವಿಸುವುದರಿಂದ ಮಧುಮೇಹ ಕಾಯಿಲೆಗೆ ಒಳಗಾಗುತ್ತಾರೆ ಎಂದು ತಿಳಿದು ಆಸೆ ಇದ್ದರೂ ಬಾಯನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಆಹಾರ ಪ್ರಿಯರು ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅಂತಹವರು ಮನೆಯಲ್ಲೇ ಸುಲಭವಾಗಿ ಈ ಪದಾರ್ಥಗಳನ್ನು ಬಳಸಿ ಓಟ್ಸ್ ಕುಕೀಸ್​ ​ ಸೇವಿಸಿ..

ಬೇಕಾಗುವ ಪದಾರ್ಥಗಳು

* 1 ಕಪ್​ ಓಟ್ಸ್

* 1/2 ಕಪ್ ಗೋಧಿಹಿಟ್ಟು

* 1/2 ಕಪ್​ ತೆಂಗಿನ ಎಣ್ಣೆ ಅಥವಾ ಬೆಣ್ಣೆ

* 1/2 ಕಪ್​ ಸಕ್ಕರೆ

* 1 ಮೊಟ್ಟೆ

* 1 ಚಮಚ ವೆನಿಲ್ಲಾ ಎಸೆನ್ಸ್​

* 1/2 ಚಮಚ ದಾಲ್ಚಿನ್ನಿ ಪುಡಿ

* 1/2 ಚಮಚ ಬೇಕಿಂಗ್ ಸೋಡಾ

* 1/4 ಚಮಚ ಉಪ್ಪು

* ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ (ಬೇಕಾದಲ್ಲಿ)

ಮಾಡುವ ವಿಧಾನ

ಮೊದಲು ಓವನ್​ ಅನ್ನು 180°C (350°F) ಗೆ ಪೂರ್ವಭಾವಿಯಾಗಿ ಕಾಯಿಸಿ ಬೇಕಿಂಗ್​ ಟ್ರೇಗೆ ಪಾರ್ಚ್‌ಮೆಂಟ್ ಪೇಪರ್ ಹಾಕಿಡಿ. ನಂತರ ಒಂದು ಬೌಲಿನಲ್ಲಿ ಓಟ್ಸ್​, ಗೋಧಿಹಿಟ್ಟು, ಬೇಕಿಂಗ್ ಸೋಡಾ, ಉಪ್ಪು ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿರಿ. ಈಗ ಇನ್ನೊಂದು ಬೌಲಿಗೆ ಕರಗಿಸಿದ ಬೆಣ್ಣೆ, ಸಕ್ಕರೆ, ಮೊಟ್ಟೆ, ವೆನಿಲ್ಲಾ ಎಸೆನ್ಸ್‌ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿಗಳನ್ನು ಸೇರಿಸಿ.

ನಂತರ ರೆಡಿ ಮಾಡಿಕೊಂಡಿರುವ ಹಿಟ್ಟಿಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ದಪ್ಪವಾದ ಕುಕೀ ಹಿಟ್ಟು ತಯಾರಾಗುತ್ತದೆ. ರೆಡಿ ಆಗಿರುವ ಹಿಟ್ಟನ್ನು ತೆಗೆದುಕೊಂಡು ಚೆಂಡಿನ ಆಕಾರ ಮಾಡಿ, ಸ್ವಲ್ಪ ಒತ್ತಿ ಬೇಕಿಂಗ್​ ಟ್ರೇಯಲ್ಲಿ ಸ್ವಲ್ಪ, ಸ್ವಲ್ಪ ದೂರದಲ್ಲಿ ಇಟ್ಟು, 10-12 ನಿಮಿಷಗಳ ಕಾಲ 180°C ಒವನ್‌ನಲ್ಲಿ ಬೇಯಿಸಿ, ತನಕ ಕುಕೀಸ್ ಗೋಲ್ಡನ್ ಬ್ರೌನ್ ಆಗಿರುತ್ತವೆ. ನಂತರ ಸ್ವಲ್ಪ ಸಮಯ ಬಿಟ್ಟು ಸೇವಿಸಿ. (ಏಜೆನ್ಸೀಸ್​)