ನ್ಯೂಸ್

ಅಮೆರಿಕಾದ ಇಂಡಿಯಾನ ಪ್ರೀಮಿಯರ್​ ವಿವಿಯ ಕೆರೆಯಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಶವಪತ್ತೆ

ಇಂಡಿಯಾನ: ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಡಿಯಾನ ದ ಪ್ರಿಮೀಯರ್​ ವಿಶ್ವವಿದ್ಯಾಲಯದ ಬಳಿ ಇರುವ ಕೆರೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ.

ಆನ್ರೋಸ್ ಜೆರ್ರಿ (21) ಮೃತ ವಿದ್ಯಾರ್ಥಿನಿ. ಈಕೆ ನೊಟ್ರೆ ಡೇಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಜನವರಿ 21ರಿಂದ ಅವರು ಕಾಣೆಯಾಗಿದ್ದರು. ಈಗ ಶವ ಪತ್ತೆಯಾಗಿದೆ.

ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಆಕೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈಕೆ ಕೇರಳದಲ್ಲಿ ಸಂಬಂಧಿಕರನ್ನು ಹೊಂದಿದ್ದು, ಬ್ಲೇನ್ ಹೈಸ್ಕೂಲ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಆಕೆ ವಿಜ್ಞಾನ ಮತ್ತು ವ್ಯವಹಾರದಲ್ಲಿ ಉತ್ತಮ ಪಾಂಡಿತ್ಯ ಪಡೆದಿದ್ದಳು.

ಮಂಗಳವಾರ ಸಂಜೆಯಿಂದ ಜರ್ರಿ ನಾಪತ್ತೆಯಾಗಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿತ್ತು. ಪೊಲೀಸರು ಹುಡುಕಾಟ ನಡೆಸಿ ಶವ ಪತ್ತೆ ಮಾಡಿದ್ದಾರೆ.

ವಿದ್ಯಾರ್ಥಿನಿ ದೇಹದಲ್ಲಿ ಯಾವುದೇ ಗಾಯಗಳು ಸಂಭವಿಸಿಲ್ಲ. ಶವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಪೊಲೀಸ್​ ಅಧಿಕಾರಿ ಮೆಕ್‌ಗ್ಯಾನ್ ಹೇಳಿದ್ದಾರೆ. (ಏಜೆನ್ಸಿಸ್​)