ನ್ಯೂಸ್

ಗರ್ಭಿಣಿ ಮೇಲೆ ಪೆಟ್ರೋಲ್​​​ ಸುರಿದ ಸೋದರ ಮತ್ತು ಆಕೆಯ ತಾಯಿ, 23 ವರ್ಷದ ವರ್ಷದ ತುಂಬು ಗರ್ಭಿಣಿ ಸ್ಥಳದಲ್ಲೇ ಸಾವು..!

ಉತ್ತರಪ್ರದೇಶ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 23 ವರ್ಷದ ತುಂಬು ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಹಾಪುರ್ ಜಿಲ್ಲೆಯ ನಾವಡ ಖುರ್ದ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯ ದೇಹದ ಮೇಲೆ ಶೇ.70ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಮಹಿಳೆಯು ಗಂಭೀರ ಸ್ಥಿತಿಯಲ್ಲಿದ್ದು, ಆಕೆಯನ್ನ ಉನ್ನತ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಹಿಳೆ ಗರ್ಭಿಣಿ ಆಗಿದ್ದಾಳೆ ಅನ್ನೋ ವಿಚಾರ ತಿಳಿದ ಕುಟುಂಬಸ್ಥರು, ಆಕೆಯನ್ನ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ.


ಪೊಲೀಸರ ಪ್ರಕಾರ, ಅವಿವಾಹಿತ ಮಹಿಳೆ ಅದೇ ಗ್ರಾಮದ ಯುವಕನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು ಮತ್ತು ಗರ್ಭಿಣಿಯಾಗಿದ್ದಾಳೆ. ಈ ವಿಷಯ ಆಕೆಯ ಕುಟುಂಬಸ್ಥರಿಗೆ ತಿಳಿದಾಗ ಆಕ್ರೋಶಗೊಂಡಿದ್ದರು. ಆದ್ದರಿಂದ ಮಹಿಳೆಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.


ಸೆಪ್ಟೆಂಬರ್ 28, ಗುರುವಾರ, ಮಹಿಳೆಯ ತಾಯಿ ಮತ್ತು ಸಹೋದರ ಅವಳನ್ನು ಹತ್ತಿರದ ಕಾಡಿಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಸಂತ್ರಸ್ತೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಹಾಪುರ್) ರಾಜ್‌ಕುಮಾರ್ ಅಗರ್ವಾಲ್, ಬಾಲಕಿಯ ತಾಯಿ ಮತ್ತು ಸಹೋದರನ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ಕುರಿತಂತೆ ಪೊಲೀಸರ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.