ನ್ಯೂಸ್

ಕಂಬಳಿ ಹೊದ್ದು ಮಲಗಿ ಬೇಬಿ ಬಂಪ್​ ವಿಡಿಯೋ ಮಾಡಿದ ಮಹಿಳೆ; ಬಳಿಕ ಆ ವಿಡಿಯೋ ನೋಡಿ ನಲುಗಿಹೋದರು...

ತುಂಬು ಗರ್ಭಿಣಿಯೋರ್ವರು ತನ್ನ ಬೇಬಿ ಬಂಪ್​ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ನಂತರ ಅದನ್ನು ವೀಕ್ಷಿಸಿದಾಗ ತೀವ್ರ ಶಾಕ್​​ಗೆ ಒಳಗಾಗಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. ಆದರೆ ಆ ಗರ್ಭಿಣಿಯ ಸಹೋದರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡಿ, ಅದೆಷ್ಟು ಭಯ ಹುಟ್ಟಿಸಿದ ಅನುಭವ ಎಂಬುದನ್ನು ಹೇಳಿದ್ದಾರೆ.

ಆಕೆ ತುಂಬು ಗರ್ಭಿಣಿ. ಮನೆಯಲ್ಲಿ ಒಂದು ಬೆಕ್ಕಿನ ಮರಿ ಮತ್ತು ನಾಯಿಯೊಂದಿಗೆ ವಾಸವಾಗಿದ್ದಳು. ಇವೆರಡು ಪ್ರಾಣಿಗಳನ್ನು ಬಿಟ್ಟರೆ ಆಕೆಯ ಮನೆಯಲ್ಲಿ ಯಾರೂ ಇಲ್ಲ. ಅಂದು ಮಂಚದ ಮೇಲೆ ಕಂಬಳಿ ಹೊದ್ದು ಮಲಗಿದ್ದ ಆಕೆಗೆ ತನ್ನ ಹೊಟ್ಟೆಯಲ್ಲಿನ ಮಗುವಿನ ಚಲನೆ ಅನುಭವಕ್ಕೆ ಬರುತ್ತಿತ್ತು. ಹೊಟ್ಟೆಯಲ್ಲಿ ಅತ್ತಿಂದತ್ತ ಅದು ಚಲಿಸುವುದು ಕಾಣುತ್ತಿತ್ತು. ಮಲಗಿದ್ದ ಆಕೆ ಅದನ್ನು ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದರು.

ಹಾಗೇ..21 ಸೆಕೆಂಡ್​ಗಳ ವಿಡಿಯೋ ಚಿತ್ರೀಕರಿಸಿದ ಆಕೆ ಅದನ್ನು ಮತ್ತೆ ನೋಡಲು ಶುರು ಮಾಡಿದರು. ಆದರೆ ಅದನ್ನು ನೋಡುತ್ತಿದ್ದ ಆಕೆ ಅಕ್ಷರಶಃ ನಲುಗಿ ಹೋದರು. ಕಾರಣ ವಿಡಿಯೋ ಕೊನೆಯಲ್ಲಿ ಕಂಡ ಒಂದು ನೆರಳು.

ಆ ಮಹಿಳೆಯ ಸಹೋದರ ಹೇಳುವ ಪ್ರಕಾರ ಮನೆಯಲ್ಲಿದ್ದ ಎರಡೂ ಪ್ರಾಣಿಗಳೂ ಆಗ ಹೊರಗೇ ಇದ್ದವು. ಬಾಗಿಲಿನ ಆಚೆ ಕೂಗುವುದು ಕೇಳುತ್ತಿತ್ತು. ಆದರೆ ಆ ನೆರಳು ಯಾವುದರದ್ದು ಎಂಬುದು ಗರ್ಭಿಣಿಗಾಗಲೀ, ಆಕೆಯ ಸಹೋದರನಿಗಾಗಲೀ ಗೊತ್ತಾಗಲಿಲ್ಲ. ಇದನ್ನೂ ಓದಿಅಂತೂ ಕರೊನಿಲ್​ ಕಿಟ್​ ಮಾರಾಟಕ್ಕೆ ಅನುಮತಿ ನೀಡಿದ ಆಯುಷ್​ ಇಲಾಖೆ…ಆದ್ರೆ ಒಂದು ಷರತ್ತು ಅನ್ವಯ !

ಮಹಿಳೆ ಕೂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿ, ನೆರಳು ನೋಡಿ ಒಂದು ಕ್ಷಣ ಹೃದಯ ನಿಂತೇ ಹೋಯಿತು. ಏನಿರಬಹುದು, ಆ ನೆರಳು ಯಾವುದರದ್ದಿರಬಹುದು ಎಂದೇ ಅರ್ಥವಾಗುತ್ತಿಲ್ಲ ಎಂದು ಬರೆದಿದ್ದಾರೆ.

ಅದು ನೆರಳೋ ಅಥವಾ ಬೇರೆ ಇನ್ನೇನೋ ಗೊತ್ತಾಗುತ್ತಿಲ್ಲ. ಅದರ ಬಣ್ಣ ಕೂಡ ಪೂರ್ತಿ ಕಪ್ಪಾಗಿರಲಿಲ್ಲ. ಕಂದು ಬಣ್ಣದಿಂದ ಕೂಡಿತ್ತು. ಆ ಮನೆಯಲ್ಲಿದ್ದ ಪ್ರಾಣಿಗಳೆರಡೂ ಬಿಳಿ ಬಣ್ಣದವು ಎಂದು ಕೂಡ ಗರ್ಭಿಣಿಯ ಸಹೋದರ ಹೇಳಿದ್ದಾರೆ. ಇದನ್ನೂ ಓದಿ:   ಟಿಕ್​​​ಟಾಕ್​ ನಿಷೇಧವನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿದ ಸಂಸದೆ ನುಸ್ರತ್​ ಜಹಾನ್​

ಅದನ್ನು ನೋಡಿದ ನೆಟ್ಟಿಗರೂ ಸಹ ಶಾಕ್​ ಆಗಿದ್ದಾರೆ. ಬಹುಶ್ಯಃ ಇನ್ಯಾವುದೋ ಪ್ರಾಣಿ ನಿಮಗೆ ಗೊತ್ತಿಲ್ಲದೆ ನಿಮ್ಮ ಮನೆಯನ್ನು ಪ್ರವೇಶಿಸಿದ್ದರಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)