ಮಾಸ್ಕೋ: ರಷ್ಯಾದ ಶಾಲಾ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ತನಗೆ ಹುಟ್ಟುವ ಮಗುವಿಗೆ 10 ವರ್ಷದ ತನ್ನ ಬಾಯ್ಫ್ರೆಂಡ್ ತಂದೆ ಎಂದು ಹೇಳಿಕೊಂಡಿದ್ದಾಳೆ. ಹೆರಿಗೆಗೆ ತಯಾರಾಗುತ್ತಿರುವ ಬಾಲಕಿ ಈಗಾಗಲೇ ಮೂರು ಹೆರಿಗೆ ಆಸ್ಪತ್ರೆಗಳ ಚಿಕಿತ್ಸೆಯನ್ನು ನಿರಾಕರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಾಲಕಿಯ ಹೆಸರು ದರ್ಯಾ ಸುಡ್ನಿಶ್ನಿಕೋವಾ (13). ತನ್ನ ಹತ್ತು ವರ್ಷದ ಬಾಯ್ಫ್ರೆಂಡ್ ಇವಾನ್ನಿಂದ ಗರ್ಭಿಣಿಯಾಗಿರುವ ಬೆನ್ನಲ್ಲೇ ದರ್ಯಾ, ರಷ್ಯಾದಲ್ಲಿ ಪ್ರಖ್ಯಾತಿ ಗಳಿಸಿದ್ದಾಳೆ. ಇದೀಗ ತನ್ನನ್ನು ಅರ್ಥ ಮಾಡಿಕೊಳ್ಳುವ ವೈದ್ಯರಿಗಾಗಿ ದರ್ಯಾ ತನ್ನ ತವರು ಬಿಟ್ಟು ಬೇರೆ ನಗರಕ್ಕೆ ಹೊರಟ್ಟಿದ್ದಾಳೆ.
ಬಾಲ್ಯಾವಸ್ಥೆಯಲ್ಲೇ ಬಾಯ್ಫ್ರೆಂಡ್ನಿಂದ ಗರ್ಭಿಣಿಯಾಗಿರುವ ದರ್ಯಾ ಇದೀಗ ರಷ್ಯಾದ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿ ಉತ್ತಮ ಚಿಕಿತ್ಸೆಗಾಗಿ ಎದುರು ನೋಡುತ್ತಿದ್ದಾಳೆ. ಹುಟ್ಟುವ ಮಗು ಸುಮಾರು 8ಎಲ್ಬಿ (3 ಕೆ.ಜಿ) ತೂಕವಿರಲಿದೆ ಎಂದಿರುವ ದರ್ಯಾ, ಸ್ವಾಭಾವಿಕ ಹೆರಿಗೆಯಾಗುವ ಭರವಸೆಯನ್ನು ಹೊಂದಿದ್ದಾಳೆ. ಆದರೆ ಅಗತ್ಯವಿದ್ದರೆ ತುರ್ತು ಸಿಸೇರಿಯನ್ ಮಾಡಲು ಅನುಮತಿ ಪತ್ರಕ್ಕೆ ದರ್ಯಾ ತಾಯಿ ಸಹಿ ಹಾಕಿದ್ದಾರೆ.
ಬಾಲಕಿ ದರ್ಯಾಳ ತವರು ಹೆಲೆಜ್ನೋಗೊರ್ಸ್ಕ್ನಲ್ಲಿರುವ ಎರಡು ಆಸ್ಪತ್ರೆಗಳು ಆಕೆಗೆ ಹೆರಿಗೆ ಮಾಡಿಸಲು ನಿರಾಕರಿಸಿವೆ. ಅವಧಿ ಮುಂಚಿನ ಗರ್ಭಿಣಿಯಾಗಿರುವುದರಿಂದಲೋ ಅಥವಾ ಇತರೆ ಕಾರಣಗಳಿಂದ ಆಸ್ಪತ್ರೆಗಳು ಹೆರಿಗೆಗೆ ನಿರಾಕರಿಸಿವೆ. ಅಂದಹಾಗೆ ದರ್ಯಾ ಹಾಗೂ ಬಾಯ್ಫ್ರೆಂಡ್ ಇವಾನ್ ಇಬ್ಬರದು ಇನ್ನೂ ಚಿಕ್ಕ ವಯಸ್ಸು. ಆದರೆ, ತಂದೆ-ತಾಯಿಯಾಗುತ್ತಿರುವುದು ಹಲವರ ಹುಬ್ಬೇರಿಸಿದೆ.
ಆದರೆ, ಮಂಗಳವಾರ ಪೆರಿನಾಟಲ್ ಕೇಂದ್ರದಲ್ಲಿರುವ ವೈದ್ಯಕೀಯ ಆಯೋಗವು ಒಂದು ನಿರ್ಧಾರಕ್ಕೆ ಬಂದಿದ್ದು, ತಮ್ಮ ಆಸ್ಪತ್ರೆಯಲ್ಲಿ ದರ್ಯಾಗೆ ಹರಿಗೆ ಮಾಡಿಸಲು ಒಪ್ಪಿದೆ. ಆದರೆ, ಆದರೆ, ದರ್ಯಾಗೆ ಕಾಡುತ್ತಿರುವ ಭಯವೇನೆಂದರೆ ತನ್ನ ಮೇಲ್ವಿಚಾರಣೆಗಾಗಿ ತರಬೇತಿನಿರತ ವೈದ್ಯರನ್ನು ನಿಯೋಜಿಸಿರುವುದು. ಹೀಗಾಗಿಯೇ ಆಕೆ ಹರಿಗೆಗೆ ತಿರಸ್ಕರಿಸಿದ್ದಾಳೆ. ಹೀಗಾಗಿಯೇ ತಜ್ಞ ವ್ಯೆದ್ಯರಿಂದಲೇ ತನ್ನ ಹೆರಿಗೆ ನಡೆಯಬೇಕೆಂದು ದರ್ಯಾ ಬಯಸಿದ್ದು, ಅದಕ್ಕಾಗಿ ಆಕೆ ತನ್ನನ್ನು ಅರ್ಥ ಮಾಡಿಕೊಳ್ಳುವ ವೈದ್ಯರ ಹುಡುಕಾಟದಲ್ಲಿದ್ದಾಳೆ.
ಸದ್ಯ ಬಾಯ್ಫ್ರೆಂಡ್ ನನ್ನ ಜತೆ ಇಲ್ಲ. ಎಲ್ಲೋ ಇದ್ದಾರೆ. ಅವರಿಗೆ 16 ವರ್ಷ ಆದ ಬಳಿಕ ತಂದೆಯ ಸ್ಥಾನವನ್ನು ತೆಗೆದುಕೊಳ್ಳಲಿದ್ದಾರೆ. ಆದರೆ ನಮ್ಮ ನಡುವೆ ಎಲ್ಲವೂ ಹೇಗೆ ನಡೆಯುತ್ತದೆ ಎಂಬುದರ ಮೇಲೆ ಮುಂದಿನ ದಿನಗಳು ಅವಲಂಬಿತವಾಗಿರುತ್ತದೆ ಎಂದಿದ್ದಾಳೆ.
ಅಂದಹಾಗೆ ದರ್ಯಾ ಸಾಮಾಜಿಕ ಜಾಲತಾಣದಲ್ಲಿ 351,000 ಹಿಂಬಾಲಕರನ್ನು ಹೊಂದಿದ್ದಾಳೆ. ಇನ್ನು ದರ್ಯಾ 16 ವರ್ಷದ ಬಾಲಕನ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದಾಳೆಂದು ನಂಬಲಾಗಿದೆ. ಇದನ್ನು ಒಪ್ಪಿಕೊಳ್ಳಲು ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ 10 ವರ್ಷ ಬಾಯ್ಫ್ರೆಂಡ್ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್)