ನ್ಯೂಸ್

ಮುಂಜಾಗ್ರತಾ ಕ್ರಮ, ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ತಬ್ಲಿಘಿಗಳ ವಿರುದ್ಧ ಎಫ್​ಐಆರ್

ಮುಂಜಾಗ್ರತಾ ಕ್ರಮ, ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ತಬ್ಲಿಘಿ ಜಮಾತ್ ಸಂಘಟನೆಯ ಸುಮಾರು 150 ಸದಸ್ಯರ ವಿರುದ್ಧ ಮುಂಬೈನ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣ ಮಾಹಿತಿ ಮುಚ್ಚಿಟ್ಟು ಕ್ವಾರಂಟೈನ್​ಗೆ ಒಳಗಾಗದೇ ತಪ್ಪಿಸಿಕೊಂಡಿದ್ದ ತಬ್ಲಿಘಿ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 271 ಹಾಗೂ 188ರ ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ರೀತಿ ದೆಹಲಿಯಲ್ಲಿ ಅನುಚಿತ ವರ್ತನೆ ತೋರಿದ ತಬ್ಲಿಘಿ ಸದಸ್ಯರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ನಿಜಾಮುದ್ದೀನ್​ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ತಬ್ಲಿಘಿ ಜಮಾತ್ ಸದಸ್ಯರನ್ನು ಕ್ವಾರಂಟೈನ್ ಮತ್ತು ತಪಾಸಣೆಗಾಗಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಕರೆತಂದಾಗ ಅವರು ಅನುಚಿತ ವರ್ತನೆ ತೋರಿಸಿದ್ದು, ಕ್ವಾರಂಟೈನ್ ಕೊಠಡಿ ಎದುರೇ ಮಲ, ಮೂತ್ರ ವಿಸರ್ಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.