ಬೆಂಗಳೂರು: ರಾಜ್ಯದಲ್ಲಿ ಪದವಿಪೂರ್ವ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಂಬ ಎರಡು ಪ್ರತ್ಯೇಕ ಮಂಡಳಿಗಳಿವೆ. ಇವೆರಡನ್ನೂ ವಿಲೀನಗೊಳಿಸಿ ಒಂದೇ ಮಂಡಳಿ ಮಾಡಲಾಗುವುದು. ಹೊಸ ಮಂಡಳಿಗೆ ಪ್ರಾಥಮಿಕ ಶಿಕ್ಷಣ ಪರಿಷತ್ ಅಂತ ನಾಮಕರಣ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದರು.
ಉತ್ತಮ ಶಾಲೆ, ಉತ್ತಮ ಶಿಕ್ಷಕ ಪ್ರಶಸ್ತಿ: ರಾಜ್ಯದಲ್ಲಿ ಉತ್ತಮ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ಜಿಲ್ಲೆಗೆ ಒಂದು ಸ್ವಾಭಿಮಾನಿ ಶಾಲೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಆದರ್ಶ ಶಿಕ್ಷಕ ಗೌರವ ಸಲ್ಲಿಸಿ, ಅವರ ಬೋಧನಾ ಕ್ರಮಗಳನ್ನು ಇತರ ಶಿಕ್ಷಕರಿಗೆ ಪರಿಚಯಿಸಲಾಗುವುದು ಎಂದರು.
ಇದನ್ನೂ ಓದಿ: ನೀಟ್, ಜೆಇಇ ನಡೆಸಲು ಬೆಂಬಲ ಸೂಚಿಸಿದ ಉತ್ತರ ಪ್ರದೇಶ
ಜೆಇಇ/ನೀಟ್ ನಡೆಸಬಹುದು: ಕರೊನಾ ನಡುವೆಯೇ ಶಿಕ್ಷಣ ಇಲಾಖೆ 8.50 ಲಕ್ಷ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಅದೇ ಮಾದರಿಯಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸಬಹುದು ಎಂದು ತಿಳಿಸಿದರು.