ನ್ಯೂಸ್

VIDEO| ಪ್ರಥಮ್​ ಬಿಗ್​ಬಾಸ್​ ಹೋಗೋಕೆ ಹೆಚ್ಚು ಸಹಾಯ ಮಾಡಿದ್ದೇ ಇವರು!

ಬೆಂಗಳೂರು: ಯೋಗರಾಜ್​ ಭಟ್​ ನಿರ್ದೇಶನದ 'ಗರಡಿ' ಸಿನಿಮಾ ಇಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ. ಈ ಸಿನಿಮಾದ ಪ್ರೀಮಿಯರ್​ ಶೋ ನೋಡಿದ ಸೆಲೆಬ್ರಿಟಿಗಳ ಪೈಕಿ ನಟ ಪ್ರಥಮ್​ ಕೂಡ ವೀಕ್ಷಿಸಿದ್ದು, ಸಿನಿಮಾ ಹೇಗಿದೆ ಎಂಬುದನ್ನು ತಿಳಿಸುವುದರ ಜತೆಗೆ ತಾವು ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಹೋಗಲು ಹೆಚ್ಚು ಸಹಾಯ ಮಾಡಿದ ಕಲಾವಿದರೊಬ್ಬರ ಹೆಸರನ್ನು ಕೂಡ ಹೇಳಿದ್ದಾರೆ.

ಯಶಸ್​ ಸೂರ್ಯ, ಸೋನಲ್​ ಮೊಂತೆರೋ ಮುಖ್ಯಭೂಮಿಕೆಯಲ್ಲಿ ಅಭಿನಯದ ಗರಡಿ ಚಿತ್ರವನ್ನು ನೋಡಿದ ಪ್ರಥಮ್​, "ಸೋನಲ್​ ಅವರು ನಮ್ಮ ಮೊದಲ ಸಿನಿಮಾ 'ಎಂಎಲ್​ಎ'ಯಿಂದಲೂ ನನಗೆ ಒಳ್ಳೆ ಸ್ನೇಹಿತೆ. ತುಂಬ ಪ್ರತಿಭಾವಂತ ನಟಿ, ಉತ್ತಮವಾಗಿ ನಟನೆ ಮಾಡಿದ್ದಾರೆ. ಸಿನಿಮಾ ವಿಚಾರವಾಗಿ ಹೊರತುಪಡಿಸಿದರೆ ಅನಾವಶ್ಯಕವಾಗಿ ಸೋನಲ್​ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದಿಲ್ಲ" ಎಂದರು.

"ಪ್ರೀತಿ-ಪ್ರೇಮ ಕಥೆಯನ್ನು ಬಿಟ್ಟು ಈ ಬಾರಿ ಬೇರೇನೆ ಮಾಡಿದ್ದಾರೆ ಯೋಗರಾಜ್​ ಭಟ್​ ಸರ್​, ಯಶಸ್​ ಅವರ ತಾಳ್ಮೆಗೆ ಈ ಚಿತ್ರವನ್ನು ನೋಡಲೇಬೇಕು. ಚಿತ್ರದ ತೀರ ಬೆಸ್ಟ್​ ಎಲಿಮೆಂಟ್​ ಅಂದ್ರೆ ಅದು ದರ್ಶನ್​ ಸರ್​. ಭಟ್ಟರು ನನಗೆ ಬಿಗ್​ಬಾಸ್​ಗೆ ಹೋಗಲು ದೊಡ್ಡ ಸಹಾಯ ಮಾಡಿದವರು. ಈ ಸಿನಿಮಾಗೆ ಅವರು ಹಾಕಿರುವ ಶ್ರಮ ದೊಡ್ಡ ಮಟ್ಟದಲ್ಲಿದೆ. ಚಿತ್ರತಂಡಕ್ಕೆ ಒಳ್ಳೇದಾಗಲಿ" ಎಂದು ಶುಭ ಹಾರೈಸಿದರು.