ನ್ಯೂಸ್

''ಅಬ್‌ ಕಿ ಬಾರ್‌ 400 ಪಾರ್‌'' ಎಂದು ಪ್ರಣೀತಾ ಸುಭಾಶ್​​ ಪೋಸ್ಟ್​​​, ಟ್ರೋಲರ್ಸ್​​​​​ ಕಾಟಕ್ಕೆ ಬೇಸತ್ತ ಪೊರ್ಕಿ ಸಿನಿಮಾ ನಟಿ..!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ನಟಿ ಪ್ರಣೀತಾ ಸುಭಾಶ್​​ಗೆ ಇನ್ನಲಿದ ಪ್ರೀತಿ ಅಭಿಮಾನ. ಈ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕೆ ಕಂಗನಾ ರಣಾವತ್ ಅವರಂತೆಯೇ ಅನೇಕ ಬಾರಿ ಪ್ರಣೀತಾ ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಇದೀಗ ಪ್ರಣೀತಾ ಸುಭಾಶ್​ ಸೋಶಿಯಲ್​ ಮೀಡಿಯಾದಲ್ಲಿ ಮಾಡಿದ ಪೋಸ್ಟ್​​ ಒಂದು ನಗೆ ಪಾಟಲಿಗೀಡಾಗಿದೆ. ಚುನಾವಣೆಯ ಫಲಿತಾಂಶವನ್ನ ಬಹುತೇಕರು ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೆ. ದೇಶವ್ಯಾಪಿ ಮೋದಿ ಅಲೆ ಇನ್ನೂ ಇದೆ ಎಂದು ಎಲ್ಲರು ಅಂದುಕೊಂಡಿದ್ದರು.ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಅಬ್‌ ಕಿ ಬಾರ್‌ 400 ಪಾರ್‌ ಎಂದೇ ಹೇಳುತ್ತಿದ್ದವರ ಸಂಖ್ಯೆ ಸಾಕಷ್ಟಿದೆ. ಇದೇ ಮಂತ್ರವನ್ನ ಅನೇಕರು ತಮ್ಮ ಸೋಶಿಯಲ್​​ ಮೀಡಿಯಾಗಳಲ್ಲಿ ಬರೆದು ಪೋಸ್ಟನ್ನೂ ಮಾಡಿದ್ದಾರೆ.

ನಿನ್ನೆ ಅತ್ಯಂತ ಆತ್ಮ ವಿಶ್ವಾಸದಲ್ಲಿ ಪ್ರಣೀತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಾರ್ಥಕ ಚಿಹ್ನೆಯ ಸಮೇತ ಅಬ್‌ ಕಿ ಬಾರ್‌ 400 ಪಾರ್‌ ಎಂದು ಬರೆದುಕೊಂಡಿದ್ದರು. ಆದರೆ ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು.

ಪ್ರಣೀತಾ ಸುಭಾಷ್ ಅವರ ಅಬ್‌ ಕಿ ಬಾರ್‌ 400 ಪಾರ್‌ ಎಂಬ ಘೋಷಣೆಯನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡುತ್ತಿದ್ದಾರೆ. ಪ್ರಣಿತಾ ಸುಭಾಷ್ ಅವರ ಕಾಲೆಳೆಯುತ್ತಿದ್ದಾರೆ. ಮುನ್ನೂರರ ಗಡಿಯನ್ನೂ ಕೂಡ ತಲುಪಲು ಸಾಧ್ಯವಾಗಲಿಲ್ಲ, ನೀವು 400ರ ಲೆಕ್ಕಾಚಾರ ಹಾಕಿದ್ದೀರಲ್ಲ ಎನ್ನುತ್ತಿರುವ ಅನೇಕರು ಭವಿಷ್ಯದಲ್ಲಿಯೂ ಹೀಗೆ ಕನಸು ಕಾಣ್ತೀರಿ ಎಂದಿದ್ದಾರೆ. ಅಬ್ ಕಿ ಬಾರ್ ಭಾರತ್ ಪಾರ್ ಎಂದು ಕೂಡ ಪ್ರಣೀತಾ ಸುಭಾಷ್ ಅವರಿಗೆ ಸಾಮಾಜಿಕ ಜಾಲತಾಣದ ನಿರ್ದಿಷ್ಟ ಗುಂಪಿನ ಸದಸ್ಯರು ಹೇಳುತ್ತಿದ್ದಾರೆ.

ಪ್ರಣೀತಾ ಸುಭಾಷ್ ಅವರ ಈ ''ಅಬ್‌ ಕಿ ಬಾರ್‌ 400 ಪಾರ್‌'' ಎಂಬ ಮನದ ಮಾತು ನಗೆಪಾಟಲಿಗೀಡಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ (ಎಕ್ಸ್​​)ನಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ. 338 ಬಾರಿ ಪ್ರಣೀತಾ ಸುಭಾಷ್ ಅವರ ಈ ಟ್ವೀಟ್‌ನ ರೀಟ್ವೀಟ್ ಕೂಡ ಮಾಡಲಾಗಿದೆ. ಅಲ್ಲದೇ ಈ ರೀಟ್ವೀಟನ್ನ ಅನೇಕ ಮೀಮ್​ ಪೇಜ್​ಗಳೂ ಟ್ರೋಲ್​ ಮಾಡುತ್ತಲಿದೆ.