ನ್ಯೂಸ್

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಆರೋಪ : ಸರ್ಕಾರದ ಪರ ಬಿ. ಎನ್ ಜಗದೀಶ್ ವಾದ

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಾದಿಸಲು ವಿಶೇಷ ಅಭಿಯೋಜಕರಾಗಿ ಬಿ. ಎನ್.ಜಗದೀಶ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಮಹಿಳೆಯೊಬ್ಬರು ಐಪಿಸಿ ಸೆಕ್ಷನ್ 354ಅ (ಲೈಂಗಿಕ ಕಿರುಕುಳ ಆರೋಪ), 354ಈ (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ಅಡಿ ದೂರು ದಾಖಲಿಸಿದ್ದು ಇದನ್ನು ಆಧರಿಸಿ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿತ್ತು.