ನ್ಯೂಸ್

ರಾಜ ರಾಣಿಯಂತೆ ರಾಗಿಣಿ-ಪ್ರಜ್ವಲ್​​ ದಂಪತಿಯ ಸ್ಪೆಷಲ್​ ಫೋಟೋಶೂಟ್​​; ಜುಬ್ಬ ಧರಿಸಿ ಪ್ರಜ್ವಲ್​​ ಮಿಂಚಿಂಗ್​..!

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಪತ್ನಿ ರಾಗಿಣಿ ಜೊತೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಮತ್ತೆ ವಧು ವರರಂತೆ ಮಿಂಚುತ್ತಿದ್ದಾರೆ.


ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಜೋಡಿಯ ಈ ವಿಶೇಷ ಫೋಟೋಶೂಟ್​​ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಂತೂ ತಮ್ಮ ನೆಚ್ಚಿನ ಜೋಡಿ ಫೋಟೋಗೆ ಕಾಮೆಂಟ್​​ ಮಾಡುತ್ತಿದ್ದಾರೆ.ಮದುವೆ ವಾರ್ಷಿಕೋತ್ಸವದ ನಿಟ್ಟಿನಲ್ಲಿ ರಾಗಿಣಿ - ಪ್ರಜ್ವಲ್ ಜೋಡಿ ಅಕ್ಟೋಬರ್ 25 ರಂದು ಫೊಟೋ ಶೂಟ್ ಮಾಡಿಸಿಕೊಂಡಿದ್ದು, ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.


ಉತ್ತರ ಭಾರತದ ವಧು ವರರಂತೆ ರಾಗಿಣಿ ಮತ್ತು ಪ್ರಜ್ವಲ್​​​ ಮಿಂಚುತ್ತಿದ್ದಾರೆ.


ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೂರು ಫೋಟೋಗಳನ್ನು ಶೇರ್ ಮಾಡಿದ್ದು, ಮತ್ತೊಂದು ವರ್ಷದ ಸೆಲೆಬ್ರೇಶನ್, ನಮ್ಮ ಲವ್ ಸ್ಟೋರಿಯನ್ನು ಎಲ್ಲಾ ಫ್ರೇಮ್ ನಲ್ಲಿ ಸೆರೆಹಿಡಿಯಲಾಗುವುದು ಎಂದು ಬರೆದುಕೊಂಡಿದ್ದಾರೆ.


ತ್ತೀಚೆಗೆ ಇಬ್ಬರೂ ತಮ್ಮ ಲವ್ ಆನಿವರ್ಸರಿಯನ್ನು ಸಹ ಸೆಲೆಬ್ರೇಟ್ ಮಾಡಿದ್ದರು.


ಈ ಮುದ್ದಾದ ಜೋಡಿ ತಮ್ಮ ಲವ್ ಸ್ಟೋರಿ (love story) ಬಗ್ಗೆ ತುಂಬಾ ಸಲ ಹೇಳಿದ್ದರು. ಇಬ್ಬರದ್ದು ಸ್ಕೂಲ್ ಡೇಸ್ ಲವ್ ಸ್ಟೋರಿ. ಪ್ರಜ್ವಲ್ 9ನೇ ತರಗತಿ ಮತ್ತು ರಾಗಿಣಿ 6ನೇ ಕ್ಲಾಸಲ್ಲಿರೋವಾಗ್ಲೇ ಲವ್ ಸ್ಟಾರ್ಟ್​ ಆಗಿತ್ತು.


ರಾಗಿಣಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಫಿಟ್ನೆಸ್, ಟ್ರಾವೆಲ್, ಜೊತೆಗೆ ಅವರು ಸಹ ನಟನೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ​​​