ಮಾಗಡಿ : ಭರ್ಗಾವತಿ ಕೆರೆ ಮೀನು ಹರಾಜು ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಮಾಡಬಾಳ್ ಗ್ರಾಪಂ ಕಾನೂನು ಉಲ್ಲಂಸಿ ಅ.21ರಂದು ಬಹಿರಂಗ ಹರಾಜು ವಾಡಲು ಮುಂದಾಗಿರುವುದನ್ನು ವಿರೋಧಿಸಿ ಪರಂಗಿಚಿಕ್ಕನ ಪಾಳ್ಯದ ನೂರಾರು ಗ್ರಾಮಸ್ಥರು ಕೆರೆಯ ಬಳಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.
ನೇತೇನಹಳ್ಳಿ ಗ್ರಾಪಂ ಸದಸ್ಯ ಶ್ರೀನಿವಾಸ್ ವಾತನಾಡಿ, ಭರ್ಗಾವತಿ ಕೆರೆ ನೇತೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಮಾಡಬಾಳ್ ಗ್ರಾಪಂನವರು ಮೀನುಗಾರಿಕೆ ಇಲಾಖೆ, ಗ್ರಾಮಸ್ಥರ ಗಮನಕ್ಕೆ ತಾರದೆ ಏಕಾಏಕಿ ಮೀನು ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ. ಪರಂಗಿಚಿಕ್ಕನಪಾಳ್ಯ ಗ್ರಾಮದ 200 ಮಂದಿ ಈ ವೃತ್ತಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಹರಾಜು ಪ್ರಕ್ರಿಯೆ ತಿರ್ವಾನ ಕೈಗೊಂಡಿರುವುದು ಸರಿಯಲ್ಲ. ಇದರಿಂದ ಗ್ರಾಮದವರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಈ ಬಗ್ಗೆ ತಾಪಂ ಇಒ ಗಮನಕ್ಕೆ ತಂದಾಗ ಹರಾಜು ಮಾಡುವುದು ಬೇಡ ಎಂದು ಸೂಚಿಸಿದ್ದಾರೆ. ಆದರೆ ಗ್ರಾಪಂ ಪಿಡಿಒ ಈ ಬಗ್ಗೆ ಇಷ್ಟೊಂದು ಕಾಳಜಿ ತೋರುತ್ತಿರುವುದೇಕೆ ಎಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಸುರೇಶ್ ಮಾತನಾಡಿ, 1994ರಿಂದ ನೇತೇನಹಳ್ಳಿ ಗ್ರಾಪಂನಿಂದಲೇ ಕೆರೆ ಮೀನು ಹರಾಜು ಹಾಕಲಾಗುತ್ತಿದೆ. ಸರ್ಕಾರ ಮತ್ತು ನೇತೇನಹಳ್ಳಿ ಗ್ರಾಪಂ ಅನುಮತಿ ಪಡೆಯದೆ ಪಂಚಾಯಿತಿಗೆ ಲಾಭ ಬರುವ ದೃಷ್ಟಿಯಿಂದ ಏಕಪಕ್ಷಿಯ ನಿರ್ಧಾರ ಕೈಗೊಂಡಿದ್ದಾರೆ. ಅ. 21ರಂದು ಕೆರೆ ಮೀನು ಹರಾಜು ಪ್ರಕ್ರಿಯೆ ವೇಳೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಾಂತರಾಜು ಮಾತನಾಡಿ, ವಾಡಬಾಳ್ ಗ್ರಾಪಂ ವ್ಯಾಪ್ತಿಯಲ್ಲಿ ಮೀನು ಹಿಡಿಯುವ ಕಸುಬು ಮಾಡುವವರು ಯಾರೂ ಇಲ್ಲ. ಹೈಕೋರ್ಟ್ ಅದೇಶಕ್ಕೆ ನಾವು ತಲೆಬಾಗುತ್ತೇವೆ. ಅದರೆ ವಾಡಬಾಳ್ ಗ್ರಾಪಂ ಕಾನೂನನ್ನು ಗಾಳಿಗೆ ತೂರಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಸರಿಯಲ್ಲ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಗ್ರಾಪಂ ಸದಸ್ಯ ಪ್ರಕಾಶ್, ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂ ಕಾರ್ಯದರ್ಶಿ ಶಿವಣ್ಣ, ಸದಸ್ಯರಾದ ವಿಜಯ್ ಕುವಾರ್, ವೆಂಕಟೇಶ್, ದೇವರಾಜು, ಮಹಾಲಿಂಗಯ್ಯ, ಶಿವಣ್ಣ, ಗಿರೀಶ್, ಕುಮಾರು, ಚಿಕ್ಕಣ್ಣ, ಸುರೇಶ್ ಇತರರು ಇದ್ದರು.
ಹರಾಜು ಪ್ರಕ್ರಿಯೆ ಸಮರ್ಪಕವಾಗಿಲ್ಲ ಎಂದು ಹೈಕೋರ್ಟ್‌ನಲ್ಲಿ ತಡೆಯಾಜ್ಞೆಯಿದೆ. ಆದರೂ ನ್ಯಾಯಾಲಯದ ಅದೇಶ ಉಲ್ಲಂಸಿ ಹರಾಜು ಪ್ರಕ್ರಿಯೆ ವಾಡುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಶಿಸು ್ತಕ್ರಮಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಗುವುದು. ಪಿ.ವಿ. ಸೀತಾರಾಂ ರಾಜ್ಯ ಬೆಸ್ತ ಸಮುದಾಯದ ಉಪಾಧ್ಯಕ್ಷ ಹೈಕೋರ್ಟ್‌ನಲ್ಲಿ ತಡೆಯಾಜ್ಞೆಯಿದೆ. ವಾಡಬಾಳ್ ಗ್ರಾಪಂನಿಂದ ಮೀನು ಪಾಶುವಾರು ಹರಾಜು ವಾಡಲು ಮುಂದಾಗಿರುವ ಬಗ್ಗೆ ಪಿಸಿ ಪಾಳ್ಯದ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ನಾಳೆ ಪಿಡಿಒ ಕರೆಸಿ ವಾತನಾಡುತ್ತೇನೆ. ಟಿ. ಪ್ರದೀಪ್ ತಾಪಂ ಇಒ