ನ್ಯೂಸ್

ಪೌರಕಾರ್ಮಿಕರು ಜೀವ ರಕ್ಷಕರಿದ್ದಂತೆ: ಸ್ವಚ್ಛತಾ ಕಾರ್ಯದ ವೇಳೆ ಸುರಕ್ಷಾ ಪರಿಕರಗಳನ್ನು ಬಳಸಿ

Ramanagara

ರಾಮನಗರ : ನಗರದ ಸ್ವಚ್ಛತೆ ಕಾಪಾಡಿ, ಜನರನ್ನು ರೋಗದಿಂದ ರಕ್ಷಿಸುವ ಪೌರಕಾರ್ಮಿಕರು ಜೀವ ರಕ್ಷಕರಿದ್ದಂತೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುವಾರ್ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂದ ವತಿಯಿಂದ ಗುರುವಾ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ವಾತನಾಡಿದ ಅವರು, ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ತೋರಬೇಕಿದೆ. ಕೆಲಸ ನಿರ್ವಹಿಸುವಾಗ ನಗರಸಭೆ ವತಿಯಿಂದ ನೀಡಿರುವ ಪರಿಕರಗಳನ್ನು ಸಮರ್ಪಕವಾಗಿ ಬಳಸಿ ರೋಗಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ನಿವೃತ್ತ ಪೌರ ಕಾರ್ಮಿಕರನ್ನು ಜಿಲ್ಲಾಧಿಕಾರಿಗಳು ಗೌರವಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನೃತ್ಯ ಕಲಾ ತಂಡಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಎಂಇಐ ವಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಉಪ ವಿಭಾಗಧಿಕಾರಿ ಮಂಜುನಾಥ್, ರಾಮನಗರ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಅಶ್ವಿನ್, ಜಿಲ್ಲಾ ಸವಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಲಲಿತಾಬಾಯಿ, ತಹಶಿಲ್ದಾರ್ ವಿಜಯ್‌ಕುವಾರ್, ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ಆರ್.ನಾಗರಾಜು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂ ಶಾಖಾ ಅಧ್ಯಕ್ಷರಾದ ಲಿಂಗರಾಜು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂ ಜಿಲ್ಲಾ ಕಾರ್ಯದರ್ಶಿ ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂ ಶಾಖಾ ಕಾರ್ಯದರ್ಶಿ ನಂಜುಂಡಕುವಾರ್, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂ ರಾಜ್ಯ ಪರಿಫಿತ್ ಸದಸ್ಯರಾದ ಎಂ. ಶ್ರೀನಿವಾಸ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂ ಶಾಖಾ ಉಪಾಧ್ಯಕ್ಷರಾದ ಕೆ.ನಾಗರಾಜಾಚಾರಿ ಹಾಗೂ ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ನಾನಗೃಹ ನಿರ್ಮಾಣ

ಪೌರ ಕಾರ್ಮಿಕರಿಗೆ ಸ್ಥಳೀಯವಾಗಿ ಉತ್ತಮ ನಿವೇಶನ ಒದಗಿಸಲಾಗುವುದು. ಪ್ರತಿದಿನ ಕೆಲಸ ಮುಗಿಸಿದ ನಂತರ ಮನೆಗೆ ಅಥವಾ ಬೇರೆ ಕೆಲಸಗಳಿಗೆ ತೆರಳಬೇಕಿರುತ್ತದೆ. ಇದಕ್ಕಾಗಿ ಸ್ನಾನ ವಾಡಿ ತೆರಳಲು ನಗರಸಭೆ ವತಿಯಿಂದ ಸ್ನಾನ ಹಾಗೂ ಶೌಚಗೃಹವನ್ನು ಶ್ರೀವಾಗಿ ನಿರ್ಮಿಸಲಾಗುವುದು ಎಂದು ರಾಕೇಶ್ ಕುಮಾರ್ ತಿಳಿಸಿದರು.ಸರ್ಕಾರದ ವತಿಯಿಂದ ಪೌರಕಾರ್ಮಿಕರಿಗೆ ವರ್ಷದಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆ ವಾಡಿಸಲು ತೀರ್ವಾನಿಸಲಾಗಿದ್ದು, ಕಾರ್ಮಿಕರು ಇದರ ಸದುಪಯೋಗಪಡೆದು ಕೊಳ್ಳಬೇಕು. ಕರೊನಾ ಸಂಕಷ್ಟದ ಸಮಯದಲ್ಲಿ ಪೌರಕಾರ್ಮಿಕರ ಕಾರ್ಯ ಸ್ಮರಣೀಯ. ಆರೋಗ್ಯ ಸಿಬ್ಬಂದಿಯಂತೆ ತಮ್ಮ ಜೀವವನ್ನು ಲೆಕ್ಕಿಸದೇ ಪೌರಕಾರ್ಮಿಕರು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಪರವಾಗಿ ಅಭಿನಂದಿಸುತ್ತೇನೆ ಎಂದರು.