ಮದ್ದೂರು: ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲ ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಜೂ.28ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಪಟ್ಟಣದ ಎಚ್.ಕೆ.ವಿ.ನಗರ, ವಿವೇಕಾನಂದನಗರ, ತಾಲೂಕಿನ ಬೆಸಗರಹಳ್ಳಿ, ಸಿ.ಎ.ಕೆರೆ, ಕ್ಯಾತಘಟ್ಟ, ಮಠದದೊಡ್ಡಿ, ಗೆಜ್ಜಲಗೆರೆ, ಛತ್ರದಹೊಸಹಳ್ಳಿ, ವಳಗೆರೆಹಳ್ಳಿ, ಸಾದೊಳಲು, ಗುರುದೇವರಹಳ್ಳಿ, ಬಸವನಪುರ, ಗೆಜ್ಜಲಗೆರೆ ಡೇರಿ, ಕ್ಯಾತಘಟ್ಟ. ಸೋಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಈ ಮಾರ್ಗದ ವ್ಯಾಪ್ತಿಗೆ ಬರುವ ರುದ್ರಾಕ್ಷಿಪುರ, ನಿಡಘಟ್ಟ, ಮಾದಪುರದದೊಡ್ಡಿ, ಕೆ.ಬಿ.ದೊಡ್ಡಿ, ಹೊಟ್ಟೇಗೌಡನದೊಡ್ಡಿ, ಎನ್.ಕೋಡಿಹಳ್ಳಿ, ಹುಣಸೇಮರದದೊಡ್ಡಿ, ತಿಪ್ಪೂರು, ಮಾದನಾಯಕನಹಳ್ಳಿ, ಅಗರಲಿಂಗನದೊಡ್ಡಿ ಬಾಲಾಜಿ ಮಾಲ್ಟ್ ಫೀಡರ್ ಸೋಮನಹಳ್ಳಿ, ಸೋಮನಹಳ್ಳಿ ಕೈಗಾರಿಕ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.