ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಿಜ ಜೀವನದ ದೇವದಾಸ್ ಎಂದು ಲೇವಡಿ ಮಾಡುವ ಮಾಡುವ ಮೂಲಕ ಬಿಹಾರದ ಪಾಟ್ನಾದಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಪ್ರತಿಪಕ್ಷಗಳ ಸಭೆಗೂ ಮುನ್ನ ಇಲ್ಲಿನ ಬಿಜೆಪಿ ಕಚೇರಿಯ ಹೊರಗೆ ಈ ಪೊಸ್ಟರ್ಗಳನ್ನು ಹಾಕಲಾಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ರೀಲ್ ದೇವದಾಸ್ರಾದರೆ, ರಾಹುಲ್ ಗಾಂಧಿ ನಿಜ ಜೀವನದಲ್ಲಿ ದೇವದಾಸ್ರಾಗಿದ್ದಾರೆ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಬಸ್ಗಳು ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ, ತಿಂಗಳೊಳಗೆ ಇದೆಲ್ಲಾ ಸರಿಹೋಗಲಿದೆ: ಸಚಿವ ರಾಮಲಿಂಗಾ ರೆಡ್ಡಿ
ಅಲ್ಲದೇ, ಮಮತಾ ದೀದಿ ಬಂಗಾಳ ತೊರೆಯುವಂತೆ, ಕೇಜ್ರಿವಾಲ್ ದೆಹಲಿ ಮತ್ತು ಪಂಜಾಬ್ ತೊರೆಯುವಂತೆ, ಲಾಲು ಮತ್ತು ನಿತೀಶ್ ಕುಮಾರ್ ಬಿಹಾರ ತೊರೆಯುವಂತೆ, ಅಖಿಲೇಶ್ ಯಾದವ್ ಉತ್ತರ ಪ್ರದೇಶವನ್ನು ತೊರೆಯುವಂತೆ ಮತ್ತು ಸ್ಟಾಲಿನ್ ತಮಿಳುನಾಡನ್ನು ತೊರೆಯುವಂತೆ ರಾಹುಲ್ ಗಾಂಧಿಗೆ ಹೇಳಿದ್ದಾರೆ. ರಾಹುಲ್ರಾಜಕೀಯವನ್ನು ತೊರೆಯಲಿ ಎಂದು ಹೇಳುವ ದಿನಗಳು ದೂರವಿಲ್ಲ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯನ್ನು ಎದುರಿಸಲು ಒಮ್ಮತಕ್ಕೆ ಬರುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿರುವ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪಾಟ್ನಾಕ್ಕೆ ಆಗಮಿಸಿದ್ದ ವೇಳೆ ಈ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.(ಏಜೆನ್ಸೀಸ್)