ನ್ಯೂಸ್

ಚುನಾವಣೆಗೂ ಮುನ್ನ ಪಕ್ಷಗಳ ಪೋಸ್ಟರ್​ ವಾರ್​; ಎಎಪಿ & ಬಿಜೆಪಿಯ ಏಟು-ಎದುರೇಟು ಹೀಗಿದೆ.. | Poster War

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆಗೂ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ನಡುವೆ ಪೋಸ್ಟರ್ ವಾರ್(Poster War) ಆರಂಭಗೊಂಡಿದೆ. ಎಎಪಿ ಪಕ್ಷವು ಬಿಜೆಪಿಯ ಕಲ್ಕಾಜಿ ಅಭ್ಯರ್ಥಿಯ ಪೋಸ್ಟರ್​ ಅನ್ನು ರಿಲೀಸ್​ ಮಾಡಿದ ಕೆಲಕ್ಷಣಗಳಲ್ಲಿಯೇ ಬಿಜೆಪಿಯ ಮಾಜಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಅವರ ಪೋಸ್ಟರ್​ ಅನ್ನು ಬಿಡುಗಡೆಗೊಳಿಸಿತು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಬಿಜೆಪಿಯ ಅಭ್ಯರ್ಥಿ ರಮೇಶ್ ಬಿಧುರಿ ಅವರನ್ನು ಬಾಹುಬಲಿ 1 ಚಿತ್ರದ ಖಳನಾಯಕನಂತೆ ಬಿಂಬಿಸಿರುವ ಪೋಸ್ಟರ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆ ಪೋಸ್ಟರ್​ನಲ್ಲಿ ಗಾಲಿಬಾಜ್ ಪಕ್ಷ ಕಾ ಗಾಳಿಬಾಜ್ ಸಿಎಂ ಚೆಹ್ರಾ ( ಆಕ್ಷೇಪಾರ್ಹ ಭಾಷೆ ಬಳಸುವುದಕ್ಕೆ ಹೆಸರುವಾಸಿಯಾದ ಪಕ್ಷದ ಸಿಎಂ) ಮತ್ತು ಬಿಜೆಪಿ ಕಾ ಗಾಳಿಬಾಜ್ ಸಿಎಂ ಚೆಹ್ರಾ ( ಬಿಜೆಪಿಯ ನಿಂದನೀಯ ಸಿಎಂ ಮುಖ) ಎಂದು ಇರುವುದನ್ನು ನೋಡಬಹುದು.

ಇದಕ್ಕೆ ಪ್ರತಿಯಾಗಿ ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಅವರನ್ನು ‘ಶೀಷ್ಮಹಲ್ ವಾಲೇ ಎಎಪಿ-ದಾ-ಎ-ಆಜಮ್’ ಎಂದು ಕರೆಯುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿತು.ಜತೆಗೆ ವಿಡಿಯೋವೊಂದನ್ನು ಹಂಚಿಕೊಂಡಿದೆ.

ದೆಹಲಿಯ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್​​)