ಅಂಚೆ ನೌಕರರ ಸಂಘ, ಪೋಸ್ಟ್ ಮನ್ ಮತ್ತು ಎಂಟಿಎಸ್, ಗ್ರಾಮೀಣ ಅಂಚೆ ನೌಕರರ ಸಂಘ ಶಿವಮೊಗ್ಗ ವಿಭಾಗದ ಪದಾಧಿಕಾರಿಗಳು ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಲ್.ಎಚ್.ಚಂದ್ರಕುಮಾರ್, ಟಿ.ಚಂದ್ರು, ವೆಂಕಟೇಶ್, ಭಾಸ್ಕರ್ ಇದ್ದರು. 
ನ್ಯೂಸ್

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಪ್ರತಿಭಟನೆ

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಸಂಘ, ಪೋಸ್ಟ್ ಮನ್ ಮತ್ತು ಎಂಟಿಎಸ್, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಶಿವಮೊಗ್ಗ ವಿಭಾಗದ ಪದಾಧಿಕಾರಿಗಳು ಬುಧವಾರ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪೋಸ್ಟಲ್ ಬಿಲ್-2023 ಹಿಂಪಡೆಯಬೇಕು. ದುರುದ್ದೇಶಪೂರಿತ ಎಐಪಿಇಯು ಪಿ-3 ಹಾಗೂ ಎನ್‌ಎಫ್‌ಪಿಇ ಸಂಘಟನೆಯ ಡಿರೆಕಗ್ನೈಸೇಷನ್ ಆದೇಶ ಹಿಂಪಡೆಯಬೇಕು. 8ನೇ ವೇತನ ಆಯೋಗವನ್ನು ನೇಮಿಸಬೇಕು. ಜಿಡಿಎಸ್ ನೌಕರರನ್ನು ಕಾಯಂಗೊಳಿಸಿ 8 ಗಂಟೆ ಕೆಲಸ ನೀಡಬೇಕು. ಒಪಿಎಸ್ ಜಾರಿಗೆ ತರಬೇಕು. ಐಡಿಸಿ ಎಂಬ ಹೆಸರಿನಲ್ಲಿ ನೌಕರರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ನಗದುರಹಿತ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು. ಮೊಬೈಲ್ ಬಳಸಲು ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಅವೈಜ್ಞಾನಿಕ ಟಾರ್ಗೆಟ್ ಗಳನ್ನು ನೀಡಬಾರದು. ಅನುಕಂಪದ ಆಧಾರದ ನೌಕರಿ ನೀಡಲು ಇರುವ ಶೇ.5ರ ಮಿತಿ ತೆಗೆಯಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಎಲ್.ಎಚ್.ಚಂದ್ರಕುಮಾರ್, ಕಾರ್ಯದರ್ಶಿ ಟಿ.ಚಂದ್ರು, ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಭಾಸ್ಕರ್ ಇತರರಿದ್ದರು.