ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS): 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉತ್ತಮ ಅವಕಾಶ ಇದೀಗ ಒದಗಿ ಬಂದಿದೆ. ಮಧ್ಯಮ ಮತ್ತು ಹಿಂದುಳಿದ ಜನರಿಗೆ ಅಂಚೆ ಕಚೇರಿಯ "ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS)" ಉತ್ತಮ ಮಾರ್ಗವಾಗಿದೆ. ಈ ಯೋಜನೆಯ ಮೂಲಕ, ನೀವು ಒಮ್ಮೆ ಹೂಡಿಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ನಿಗದಿತ ಮೊತ್ತವನ್ನು ಪಡೆಯಬಹುದು. ಸರ್ಕಾರದಿಂದ ಖಾತರಿಪಡಿಸಲ್ಪಟ್ಟಿರುವುದರಿಂದ ಇದು ತುಂಬಾ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.
ಇದನ್ನೂ ಓದಿ:ಮುಂದಿನ ಏಕದಿನ ವಿಶ್ವಕಪ್ ಭಾರತಕ್ಕೆ ಒಲಿಯುವುದು ಗ್ಯಾರಂಟಿ: ಅಚ್ಚರಿಯ ಕಾರಣ ಕೊಟ್ಟ ನೆಟ್ಟಿಗರು! Shubman Gill
ಹೌದು ನೀವು 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ, ಭಾರತೀಯ ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ (Post Office Monthly Income Scheme - POMIS) ಮೂಲಕ ತಿಂಗಳಿಗೆ 9,250 ರೂ.ಗಳ ಖಚಿತ ಆದಾಯ ಪಡೆಯಬಹುದು.(15 ಲಕ್ಷ ಹೂಡಿಕೆ ಮಾಡಿದ್ರೆ) ಇದು ಸರ್ಕಾರಿ ಬ್ಯಾಂಕ್ನಿಂದ ರಕ್ಷಣೆಯುತವಾದ ಯೋಜನೆಯಾಗಿದೆ.
ಭಾರತದ ನಿವಾಸಿಯಾಗಿರಬೇಕು. ವಯಸ್ಸು: 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಸ್ವತಂತ್ರವಾಗಿ ಖಾತೆ ತೆರೆಯಬಹುದು. ಆದರೆ,10 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಜಂಟಿ ಖಾತೆ(Joint Account) ತೆರೆಯಬಹದು. ಒಬ್ಬ ವ್ಯಕ್ತಿಯ ಒಟ್ಟು ಹೂಡಿಕೆ 9 ಲಕ್ಷಕ್ಕಿಂತ ಹೆಚ್ಚಾಗಿರಬಾರದು (ಒಂದೇ ಖಾತೆಯಲ್ಲಿ). ಸಹ-ಖಾತೆ (Joint Account) ಮೂಲಕ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ವಾರ್ಷಿಕ 7.4ರಷ್ಟು ಬಡ್ಡಿ ಸಿಗುತ್ತೆ. 9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ತಿಂಗಳು ಆದಾಯ ಪಡೆಯಬಹುದು. ಇದನ್ನು ಪ್ರತಿ ತಿಂಗಳು ನಿಮ್ಮ ಖಾತಗೆ ನೆರವಾಗಿ ಬರುತ್ತದೆ. ಇದರಿಂದ ದಿನನಿತ್ಯದ ಮನೆಯ ಖರ್ಚುಗಳಿಗೆ ನಿಗಲಿವೆ. ಇನ್ನು ಕನಿಷ್ಠ ಹೂಡಿಕೆ 1000 ರೂ ಇದೆ. ಅವಧಿ: 5 ವರ್ಷಗಳು (ಪೀಳಿಗೆ ಮುಗಿದ ನಂತರ ಹೂಡಿಕೆ ಮಾಡಿದ ಮೊತ್ತವನ್ನು ಮರಳಿ ಪಡೆಯಬಹುದು).
ಖಾತೆ ತೆರೆಯುವುದು: ಯಾವುದೇ ಪೋಸ್ಟ್ ಆಫೀಸ್‌ನಲ್ಲಿ ಆಧಾರ್, PAN ಮತ್ತು ಫೋಟೋದೊಂದಿಗೆ ತೆರೆಯಬಹುದು.
ಲಾಭ: ನಿವೃತ್ತಿ ನಂತರ ಅಥವಾ ಸ್ಥಿರ ಆದಾಯಕ್ಕಾಗಿ ಸೂಕ್ತ. ಆದರೆ, ಹೂಡಿಕೆ ಮೊದಲು ತೆರಿಗೆ ಸಲಹೆ ಪಡೆಯಿರಿ.
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್‌ಸೈಟ್ www.indiapost.gov.in ನಲ್ಲಿ ಪರಿಶೀಲಿಸಿ. ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ!
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.