ನ್ಯೂಸ್

ಫೆಬ್ರವರಿಯಲ್ಲಿ ಜಿಪಂ,ತಾಪಂ ಚುನಾವಣೆ ಸಾಧ್ಯತೆ|Possibility of ZP and TP elections in February

ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಆಡಳಿತ ಕಾಂಗ್ರೆಸ್, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೂ ಸನ್ನದ್ಧ(Taluk and Zilla Panchayat elections are also ready)ವಾಗಿದೆ.

ಇತ್ತ, ಈ ಚುನಾವಣೆಗೆ ಮೀಸಲಾತಿ ಪಟ್ಟಿಯನ್ನು ಡಿ.12ರ ಒಳಗಾಗಿ ಪ್ರಕಟಿಸುವಂತೆ ಹೈಕೋಟ್ ಸರ್ಕಾರಕ್ಕೆ ತಾಕೀತು ಮಾಡಿದೆ.

ಸರ್ಕಾರ ಕೂಡ ಫೆಬ್ರವರಿ ವೇಳೆಗೆ ಜಿಪಂ, ತಾಪಂ ಚುನಾವಣೆ ನಡೆಸಲು ಆಸಕ್ತಿ ತೋರಿದೆ(Possibility of ZP and TP elections in February). ಡಿಸಿಎಂ ಡಿ.ಕೆ.ಶಿವಕುಮಾರ್(D K Shivakumar) ಈ ಚುನಾವಣೆ ನಡೆಸುವ ಸುಳಿವು ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ನಿರ್ದೇಶನದನ್ವಯ ಡಿ.12ರ ಒಳಗಾಗಿ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸುವ ನಿರೀಕ್ಷೆ ಹೊಂದಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.

ಸರ್ಕಾರ ಡಿ.12ರ ಒಳಗಾಗಿ ಮೀಸಲಾತಿ ಪ್ರಟಿಸಿದರೆ ಜನವರಿ ಅಂತ್ಯ ಇಲ್ಲವೇ ೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿದೆ.

2021 ರಿಂದ ಚುನಾವಣೆ ಇಲ್ಲ

ಕ್ಷೇತ್ರ ಪುನರ್ವಿಂಗಡಣೆ, ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾರಣದಿಂದ 2021ನೇ ಸಾಲಿನ ಮೇ/ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆ ಇದುವರೆಗೂ ನಡೆದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಹೈಕೋರ್ಟ್ ಮಟ್ಟಿಲೇರುತ್ತಿರುವ ಕಾರಣ ಚುನಾವಣೆ ವಿಳಂಬವಾಗಿವೆ.

ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಎಷ್ಟು ಪಂಚಾಯಿತಿ? ಎಷ್ಟು ಸದಸ್ಯರು?

31 ಜಿಲ್ಲೆಗಳ 239 ತಾಲೂಕುಗಳಲ್ಲಿ ಒಟ್ಟು 1130 ಜಿಲ್ಲಾ ಪಂಚಾಯಿತಿ ಸದಸ್ಯ ಕ್ಷೇತ್ರ ಹಾಗೂ 3671 ತಾಲೂಕು ಪಂಚಾಯಿತಿ ಸದಸ್ಯ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಈ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದೆ.