ಪೋರ್ಟ್ಲ್ಯಾಂಡ್: ಅಮೆರಿಕದ ಪೋರ್ಟ್ಲ್ಯಾಂಡ್ ಕನ್ನಡ ಕೂಟ ನಾಡ ಹಬ್ಬವನ್ನು ಇಂದು ಆಚರಿಸಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡದ ಅಘೋಷಿತ ರಾಜ್ಯ ಗೀತೆ ಎಂದೇ ಕನ್ನಡಿಗರ ಮನೆ ಮಾತಗಿರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು” ಗೀತೆಯ ಸಾಲುಗಳನ್ನು ಹೇಳುವ ಮುಖಾಂತರ ಕನ್ನಡ ಅಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 2ಸಾವಿರ ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಬರಿ ಭಾಷೆಯಲ್ಲ ಅದು ಸಂಸ್ಕೃತದ ಆಗರ ಎಂದರು.
ಇದನ್ನೂ ಓದಿ: ಆಂಗ್ಲಭಾಷೆಯ ಭ್ರಮೆಯಿಂದ ಹೊರಬನ್ನಿ: ಚಂದ್ರಶೇಖರ ಕಂಬಾರ