ನ್ಯೂಸ್

ಮೋದಿ ಸಂಪುಟ: ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ, ಶೋಭಾ ಕರಂದ್ಲಾಜೆಗೆ ಭರ್ಜರಿ ಖಾತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್​ ರಚನೆ ಆಗಿದ್ದು, 43 ಹೊಸ ಹಾಗೂ ಹಳೆಯ ಸಚಿವರು ಪ್ರಮಾಣ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 4 ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ನೂತನ ಸಚಿವರು ಖಾತೆ ಹಂಚಿಕೆ ಪಟ್ಟಿ ಇಂದು ರಾತ್ರಿಯೇ ಬಿಡುಗಡೆಯಾಗಿದೆ.

ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ರಾಜ್ಯ ಸಚಿವರ ಖಾತೆ ದೊರಕಿದೆ. ಕರ್ನಾಟಕ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಅವರಿಗೆ ಕೌಶಲ್ಯ ಸಚಿವಾಲಯ ರಾಜ್ಯ ಸಚಿವ, ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರ ಜವಬ್ದಾರಿಯನ್ನು ನೀಡಲಾಗಿದೆ.

ಬೀದರ್​ ಸಂಸದ ಭಗವಂತ ಖೂಬಾ ಅವರಿಗೆ ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವಾಲಯದ ರಾಜ್ಯ ಸಚಿವರು ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವರ ಖಾತೆಯನ್ನು ನೀಡಲಾಗಿದೆ.

ಚಿತ್ರದುರ್ಗದ ಸಂಸದ ಎ. ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.

ಹೊಸದಾಗಿ ಸಚಿವ ಸಂಪುಟ ಸೇರ್ಪಡೆಗೊಂಡ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಈ ಕೆಳಕಂಡತಿದೆ.